Saturday, May 4, 2024
spot_imgspot_img
spot_imgspot_img

ಮಂಗಳಾದೇವಿ ದೇವಸ್ಥಾನದಲ್ಲಿ ಕೇಸರಿ ಧ್ವಜ ಅಳವಡಿಸಿದ ಶರಣ್ ಪಂಪ್ವೆಲ್ ಹಾಗೂ ಬಜರಂಗದಳದ ಕಾರ್ಯಕರ್ತರ ಮೇಲೆ ಪ್ರಕರಣ ; ರಾಜ್ಯ ಸರಕಾರದ ವಿರುದ್ಧ ಮುರಳೀಕೃಷ್ಣ ಹಸಂತ್ತಡ್ಕ ಆಕ್ರೋಶ

- Advertisement -G L Acharya panikkar
- Advertisement -
This image has an empty alt attribute; its file name is balavikas-866x1024.jpg

ಮಂಗಳೂರು : ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕಾನೂನಿನ ಅಡಿಯಲ್ಲಿ ಹಿಂದೂಗಳಿಗೆ ಮಾತ್ರ ಅವಕಾಶ ಎಂಬ ಕಾನೂನಿಗೆ ಬೆಂಬಲವಾಗಿ ನಿಂತ ಶರಣ್ ಪಂಪ್ವೆಲ್ ಮೇಲೆ ಕೇಸ್ ದಾಖಲು ಮಾಡಿರುವುದಕ್ಕೆ ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳೀಕೃಷ್ಣ ಹಸಂತ್ತಡ್ಕ ಖಂಡನೆ ವ್ಯಕ್ತಪಡಿಸಿದ್ದಾರೆ.‌

ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಉತ್ಸವದ ಸಂದರ್ಭ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ಅಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು ಅದು ಬಿಟ್ಟು ಹಿಂದುಯೇತರರಿಗೆ ಜಾತ್ರೆಯ ಸ್ಟಾಲ್ ಗಳನ್ನು ಏಲಂ ಮಾಡಿರುವುದನ್ನು ವಿರೋಧಿಸಿ ಶರಣ್ ಪಂಪ್ವೆಲ್ ಅವರು ದೇವಸ್ಥಾನದ ಉತ್ಸವಗಳ ಸಂದರ್ಭ ದೇವಸ್ಥಾನದ ಜಾಗದಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಬೇಕೆಂದು ಅಗ್ರಹಿಸಿರುವ ಸಂದರ್ಭ ಅವರ ವಿರುದ್ದ ಕೋಮು ಪ್ರಚೋದನೆ ಕೇಸ್ ದಾಖಲಿಸಿರುವುದನ್ನು ಉಗ್ರವಾಗಿ ಖಂಡಿಸುತ್ತೇವೆ.

ಎಲ್ಲಾ ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ಕಾನೂನಿನ ವ್ಯವಸ್ಥೆಯಡಿಯಲ್ಲಿ ವ್ಯಾಪಾರ ನಡೆಯಬೇಕೆ ಹೊರತು ಯಾವುದೇ ಪಕ್ಷದ ಪರವಾಗಿ ಮುಸಲ್ಮಾನರ ತುಷ್ಠಿಕರಣಕ್ಕೊಸ್ಕರ ನಡೆಯುವ ಈ ರೀತಿಯ ಘಟನೆಯನ್ನು ಉಗ್ರವಾಗಿ ಖಂಡಿಸುತ್ತೇವೆ. ಶರಣ್ ಪಂಪ್ವೆಲ್ ಅವರ ಬಂಧನಕ್ಕೆ ಮುಂದಾದರೆ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು.

ಹಿಂದೂ ಸಮಾಜದ ಪರವಾಗಿ ಧ್ವನಿ ಎತ್ತುವ ಹಿಂದೂ ಸಂಘಟನೆಯ ನಾಯಕರನ್ನು ಮುಸ್ಲಿಂರ ಓಲೈಕೆಗಾಗಿ ನೀಚ ರಾಜಕೀಯ ಉದ್ದೇಶದಿಂದ ಧಮನಿಸಲು ಪ್ರಯತ್ನಿಸಿದರೆ ಹಿಂದೂ ಸಮಾಜ ಇದಕ್ಕೆ ತಕ್ಕ ಉತ್ತರ ಕೊಡುತ್ತದೆ.

- Advertisement -

Related news

error: Content is protected !!