Saturday, June 28, 2025
spot_imgspot_img
spot_imgspot_img

ಕಾಸರಗೋಡು : ಜನನಿಬಿಡ ಪ್ರದೇಶದಲ್ಲಿ ವಿಮಾನ ಆಕಾರದ ಡ್ರೋನ್‌ ಪತ್ತೆ

- Advertisement -
- Advertisement -
This image has an empty alt attribute; its file name is VC_PUC_-1-819x1024.jpg

ಕಾಸರಗೋಡು: ಮಂಜೇಶ್ವರದ ಚಿಗುರುಪಾದೆ ಎಂಬಲ್ಲಿ ಜನನಿಬಿಡ ಪ್ರದೇಶದಲ್ಲಿ ವಿಮಾನದ ಆಕಾರದ ಡ್ರೋನ್ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಘಟನಾ ಸ್ಥಳಕ್ಕೆ ಮಂಜೇಶ್ವರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಡ್ರೋನ್ ಗೇಲ್ ಕಂಪನಿಗೆ ಸೇರಿದ್ದು ಎಂದು ತಿಳಿದುಬಂದಿದೆ.

ಗ್ಯಾಸ್ ಪೈಪ್‌ಲೈನ್‌ನ ಸಮೀಕ್ಷೆ ನಡೆಸುತ್ತಿದ್ದಾಗ ಡ್ರೋನ್ ಜಿಪಿಎಸ್ ಸಂಪರ್ಕವನ್ನು ಕಳೆದುಕೊಂಡಿತು ಮತ್ತು ನಂತರ ನೆಲಕ್ಕೆ ಅಪ್ಪಳಿಸಿತು. GAIL ಇಲಾಖೆಯ ಸಿಬ್ಬಂದಿ ಡ್ರೋನ್ ಅನ್ನು ಹಿಂಪಡೆದಿದ್ದಾರೆ.ಡ್ರೋನ್ ಬಿದ್ದ ದೃಶ್ಯವನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು ಎಂದು ತಿಳಿದುಬಂದಿದೆ.

- Advertisement -

Related news

error: Content is protected !!