- Advertisement -
- Advertisement -
ಬೆಂಗಳೂರು: ನವೀನ್ ಎಂಬಾತ ಫೇಸ್ ಬುಕ್ ನಲ್ಲಿ ಮಾಡಿದ ಆಕ್ಷೇಪಾರ್ಹ ಪೋಸ್ಟ್ ವೊಂದನ್ನು ಮುಂದಿಟ್ಟಕೊಂಡು ಸಾವಿರಾರು ಪುಂಡರು ನಿನ್ನೆ ರಾತ್ರಿ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡಿದ್ದರು. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಬೆಂಕಿ ಇಟ್ಟಿದ್ದರು. ಆದ್ರೆ ಸೂಕ್ತ ಸಮಯದಲ್ಲಿ ಅವರ ಕುಟುಂಬವನ್ನು ಬೇರೆಡೆ ಶಿಫ್ಟ್ ಮಾಡಿದ ಕಾರಣ ಅವರು ಘಟನೆಯಿಂದ ಪಾರಾಗಿದ್ದಾರೆ.

ಗೋವಿಂದ ಪುರದಲ್ಲಿದ್ದ ಮನೆಯಿಂದ ಅವರನ್ನು ಆರ್ ಟಿ ನಗರಕ್ಕೆ ಶಿಫ್ಟ್ ಮಾಡಲಾಗಿದ್ದು, ಸದ್ಯ ಅವರು ಕ್ಷೇಮವಾಗಿದ್ದಾರೆ ಎಂದು ತಿಳಿದುಬಂದಿದೆ. ಅಖಂಡ ಶ್ರೀನಿವಾಸ್ ಅವರ ಹಳೆ ನಿವಾಸಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -