- Advertisement -
- Advertisement -
ಬಂಟ್ವಾಳ:-ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಟೆಂಪೋವೊಂದರಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟಮಾಡುವುದನ್ನು ಪತ್ತೆ ಹಚ್ಚಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಿರುವ ಘಟನೆ ಇಂದು ಮುಂಜಾನೆ ನಡೆದಿದೆ.
ಕಕ್ಕೆಪದವು ನಿಂದ ಅಕ್ರಮ ಜಾನುವಾರು ಸಾಗಾಟದ ಟೆಂಪೋವನ್ನು ಹಿ..ಜಾ. ವೇ.ಯ ಕಾರ್ಯಕರ್ತರು ಬೆನ್ನಟ್ಟಿ ಬರುವುದನ್ನು ಗಮನಿಸಿದ ದನ ಕಳ್ಳರು ಪರಾರಿಯಾಗುವಭರದಲ್ಲಿ ಮುಲ್ಕಾಜೆಮಾಡ ದಲ್ಲಿ ಮನೆಯೊಂದಕ್ಕೆ ಡಿಕ್ಕಿಯಾಗಿದೆ.ಈ ಸಂದರ್ಭ ಒಂದು ಹಸು ಸ್ಥಳದಲ್ಲಿ ವಾಹನದಿಂದ ಜಿಗಿದಿದೆ,ಅಲ್ಲಿಂದಲೂ ತಪ್ಪಿಸಿಕೊಂಡ ದನ ಕಳ್ಳರ ವಾಹನವನ್ನು ಅಲ್ಲಿಪಾದೆಯಲ್ಲಿ ಅಡ್ಡಹಾಕುವಲ್ಲಿ ಯುವಕರು ಯಶಸ್ವಿಯಾಗಿದ್ದಾರೆ. ಟೆಂಪೋ ಸಹಿತ ಮೂರು ಹಸುಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಲಾಗಿದೆ..
- Advertisement -