Saturday, June 28, 2025
spot_imgspot_img
spot_imgspot_img

ಅಕ್ರಮ ಮದ್ಯ ಮಾರಾಟ-ಇಡ್ಕಿದು ನಿವಾಸಿ ಪೋಲೀಸರ ವಶಕ್ಕೆ

- Advertisement -
- Advertisement -

ವಿಟ್ಲ: ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೋಲೀಸರು ದಾಳಿ ನಡೆಸಿ ವಶಕ್ಕೆ ಪಡೆದ ಘಟನೆ ಇಡ್ಕಿದು ಮಿತ್ತೂರಿನಲ್ಲಿ ನಡೆದಿದೆ.

ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮಿತ್ತೂರು ವಸಂತ ಎಂಬವರು ಅಂಗಡಿಯ ಬಳಿಯಲ್ಲಿ ಅಕ್ರಮವಾಗಿ ಮದ್ಯದ ಸ್ಯಾಚೆಟ್ ಗಳನ್ನು ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿಯಲ್ಲಿ ದಾಳಿ ನಡೆಸಲಾಗಿದೆ. ಪೋಲೀಸರನ್ನು ಕಂಡು ತಪ್ಪಿಸಲು ಯತ್ನಿಸಿದ್ದಾರೆ. 180 ಎಮ್ ಎಲ್ ನ ಮೈಸೂರು ಲ್ಯಾನ್ಸರ್ ಸ್ಯಾಚೇಟ್,ಒಂದು ಗಾಜಿನ ಲೋಟ ಮತ್ತು ಒಂದು ನೀರಿನ ಬಾಟಲಿ ಇಟ್ಟುಕೊಂಡು ಮಧ್ಯ ಮಾರಾಟ ಮಾಡುತ್ತಿದ್ದರೆನ್ನಲಾಗಿದೆ. ವಿಟ್ಲ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!