Friday, April 19, 2024
spot_imgspot_img
spot_imgspot_img

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅನೌನ್ಸ್ ಮಾಡಿದ ಹೊಸ ಸ್ವದೇಶಿ ಗೇಮ್ FAU-G.

- Advertisement -G L Acharya panikkar
- Advertisement -

ಮುಂಬೈ: ಪಬ್ ಜಿ ಬ್ಯಾನ್ ಆದ ಬೆನ್ನಲ್ಲೇ ಬಾಲಿವುಡ್ ನಟ ಅಕ್ಷಯ್ ಕುಮಾರ್ FAU-G ಎಂಬ ಮಲ್ಟಿಪ್ಲೇಯರ್ ಗೇಮ್ ಒಂದನ್ನು ಪರಿಚಯಿಸಿದ್ದು, ಈ ಅಪ್ಲಿಕೇಶನ್ ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಯೋಜನೆಗೆ ಬೆಂಬಲ ನೀಡುತ್ತದೆ ಎಂದಿದ್ದಾರೆ.

ಈ ಅಪ್ಲಿಕೇಷನ್ ಶೀಘ್ರದಲ್ಲಿ ಪ್ಲೇಸ್ಟೋರ್ ಗಳಲ್ಲಿ ಲಭ್ಯವಿರಲಿದ್ದು, ಸೈನಿಕರ ತ್ಯಾಗ ಬಲಿದಾನಗಳ ಕುರಿತು ಈ ಆಪ್ ನಲ್ಲಿ ತಿಳಿಸಲಾಗಿದೆ. ಮಾತ್ರವಲ್ಲದೆ ಈ ಗೇಮಿಂಗ್ ಆಪ್ ನಿಂದ ಬರುವ 20% ಆದಾಯವನ್ನು ಭಾರತ್ ಕೀ ವೀರ್ ಟ್ರಸ್ಟ್ ಗೆ ದೇಣಿಗೆಯಾಗಿ ನೀಡಲಾಗುವುದು ಎಂದು ಅಕ್ಷಯ್ ಕುಮಾರ್ ತಿಳಿಸಿದ್ದಾರೆ.

ಇನ್ ಸ್ಟಾಗ್ರಾಂನಲ್ಲಿ ಮಾಹಿತಿ ನಿಡಿದ ಅಕ್ಷಯ್, ಪ್ರಧಾನಿ ಮೋದಿಯವರ ಆತ್ಮನಿರ್ಭರ ಯೋಜನೆಯೊಂದಿಗೆ ಕೈಜೋಡಿಸುತ್ತಾ, ಈ ಗೇಮಿಂಗ್ ಆಪ್ ಅಭಿವೃದ್ದಿಪಡಿಸಲಾಗಿದೆ. FAU-G ಎಂದರೇ Fearless and United-Guards. ಇದರಲ್ಲಿ ಮನೋರಂಜನೆ ಮಾತ್ರವಲ್ಲದೆ ಆಟಗಾರರಿಗೆ ಸೈನಿಕರ ತ್ಯಾಗ ಬಲಿದಾನಗಳ ಬಗ್ಗೆಯೂ ಮಾಹಿತಿ ನೀಡಲಾಗುವುದು. ಈ ಗೇಮ್ ನಿಂದ ಬರುವ 20% ಆದಾಯವನ್ನು #Bharatkeveer ಟ್ರಸ್ಟ್ ಗೆ ನೀಡಲಾಗುವುದು. ಇದು ನನ್ನ ಮೊದಲ ಗೇಮಿಂಗ್ ಉದ್ಯಮವಾಗಿದೆ ಎಂದಿದ್ದಾರೆ.

FAU-G ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ಹೊರಬೀಳಬೇಕಾಗಿದೆ. ಕೇಂದ್ರ ಸರ್ಕಾರ 118 ಆಪ್ ಗಳನ್ನು ನಿಷೇಧ ಮಾಡಿದ ಬೆನ್ನಲ್ಲೇ FAU-G ಪ್ರಕಟಣೆ ಬಂದಿದ್ದು ಕುತೂಹಲ ಮೂಡಿಸಿದೆ. 

- Advertisement -

Related news

error: Content is protected !!