Thursday, March 28, 2024
spot_imgspot_img
spot_imgspot_img

ಮದುವೆಗಾಗಿ ಮತಾಂತರ ಆಗುವುದು ಸ್ವೀಕಾರಾರ್ಹವಲ್ಲ-ಅಲಹಾಬಾದ್ ಹೈಕೋರ್ಟ್ ಆದೇಶ

- Advertisement -G L Acharya panikkar
- Advertisement -

ಅಲಹಾಬಾದ್ ಅ31: ಮದುವೆಗಾಗಿ ಮತಾಂತರ ಸ್ವೀಕಾರಾರ್ಹವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.


ಕೇವಲ ವಿವಾಹದ ಉದ್ದೇಶಕ್ಕಾಗಿ ಧರ್ಮವನ್ನು ಬದಲಾಯಿಸಲು ಬಯಸುವುದು ಸರಿಯಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಅಂತರ್ ಧರ್ಮೀಯ ವಿವಾಹ ಮಾಡಿಕೊಂಡ ದಂಪತಿ ಪೊಲೀಸ್ ರಕ್ಷಣೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಲಾಗಿದೆ.

ಮುಸ್ಲಿಂ ಮಹಿಳೆ ಮದುವೆಗೆ ಒಂದು ತಿಂಗಳ ಮುಂಚೆಯೇ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದನ್ನು ಉಲ್ಲೇಖಿಸಿ, ಮದುವೆಗಾಗಿಯೇ ಮತಾಂತರ ಆಗಿರುವುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಹೇಳಿದರು.


2014 ರಲ್ಲಿ ಇಂತಹುದೇ ಮತ್ತೊಂದು ಪ್ರಕರಣದ ಹೈಕೋರ್ಟ್ ತೀರ್ಪನ್ನು ನ್ಯಾಯಮೂರ್ತಿ ಮಹೇಶ್ ಚಂದ್ರ ಉಲ್ಲೇಖಿಸಿದರು. ಹಿಂದೂ ಧರ್ಮೀಯ ಹುಡುಗಿಯೊಬ್ಬಳು ಇಸ್ಲಾಂ ಧರ್ಮದ ಬಗ್ಗೆ ಯಾವುದೇ ಅವಗಾಹನೆ ಇಲ್ಲದೇ ಮದುವೆಗಾಗಿ ಮತಾಂತರಗೊಂಡು ಮುಸ್ಲಿಂ ಯುವಕನನ್ನು ಮದುವೆಯಾದ ಪ್ರಕರಣ ಕುರಿತಂತೆ ಅಲಹಾಬಾದ್ ಹೈಕೋರ್ಟ್ 2014 ರಲ್ಲಿ ತೀರ್ಪು ನೀಡಿತ್ತು ಎಂದು ಹೇಳಿದರು.

- Advertisement -

Related news

error: Content is protected !!