ಸ್ಥಳಕ್ಕೆ ಆಗಮಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು


ಅಳಕೆಮಜಲು: ಮಂತ್ರವಾದಿ ಖಾಸಿಂ ಮನೆಯಲ್ಲಿ ಅಮಾವಾಸ್ಯೆಯ ತಡರಾತ್ರಿ ಹಿಂದೂ ಹುಡುಗಿಯರು ಪತ್ತೆಯಾದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ವಿಷಯ ತಿಳಿದ ಸ್ಥಳೀಯರು ಹಿಂದೂ ಹುಡುಗಿಯರನ್ನು ಮತ್ತು ಮಂತ್ರವಾದಿ ಖಾಸಿಂ ನನ್ನು ಪ್ರಶ್ನಿಸಿದ್ದಾರೆ. ಆಗ ಖಾಸಿಂ ಇವತ್ತು ಅಮಾವಾಸ್ಯೆ ಆದ ಕಾರಣ ಅವರ ಪರಿಹಾರ ಕ್ರಿಯೆ ಕಾರ್ಯ ಇದೆ ಎಂದು ಉತ್ತರ ನೀಡಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ.
ಬಳಿಕ ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಾಳಕ್ಕಾಗಮಿಸುತಿದ್ದಂತೆ ಹುಡುಗಿಯರನ್ನು ಅವರ ಮನೆಗೆ ಬುದ್ದಿ ಹೇಳಿ ಕಳುಹಿಸಿ ಮಂತ್ರವಾದಿ ಖಾಸಿಂ ಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಹಿಂದೂ ಸಂಘಟನೆಯ ಕಾರ್ಯಕರ್ತರು ವಿಟ್ಲ ಠಾಣೆಗೆ ದೂರವಾಣಿ ಮೂಲಕ ದೂರು ನೀಡಿದ್ದಾರೆ.
ಅಳಕೆಮಜಲು ಮಂತ್ರವಾದಿ ಖಾಸಿಂ ಈ ಹಿಂದೆ ಈತ ರಿಕ್ಷಾ ಡ್ರೈವರ್ ಆಗಿದ್ದ ಖಾಸಿಂ ಕೆಲ ಸಮಯದ ಹಿಂದೆ ಸಂಶಯಾಸ್ಪದ ರೀತಿಯಲ್ಲಿ ಮಂತ್ರವಾದಿಯಾಗಿದ್ದಾನೆ ಎಂದು ಸ್ಥಳೀಯರ ವಾದವಾಗಿದೆ.
ರಂಜಾನ್ ಮತ್ತು ಯುಗಾದಿ ಹಬ್ಬ ಸಮೀಪಿಸುತ್ತಿದ್ದಂತೆ ಸಾಮರಸ್ಯದಿಂದ ಬದುಕುವ ಈ ಸಮಾಜದಲ್ಲಿ ತಡರಾತ್ರಿ ಹಿಂದೂ ಹುಡುಗಿಯರನ್ನು ಮನೆಗೆ ಕರೆಸಿ ವಿಷ ಬೀಜ ಬಿತ್ತುವ ಖಾಸಿಂ ನಂತಹ ಕಿಡಿಗೇಡಿಗಳಿಗೆ ಪೊಲೀಸರು ತಕ್ಕ ಬುದ್ದಿ ಕಲಿಸಬೇಕು ಎನ್ನುವುದು ಸ್ಥಳೀಯರ ಆರೋಪವಾಗಿದೆ.