Tuesday, April 23, 2024
spot_imgspot_img
spot_imgspot_img

ಕಾಂಚನಾ – 3 ನಟಿ ಅಲೆಕ್ಸಾಂಡ್ರಾ ಶವ ಗೋವಾದಲ್ಲಿ ಪತ್ತೆ..!

- Advertisement -G L Acharya panikkar
- Advertisement -

ಗೋವಾ: ತಮಿಳು ಚಿತ್ರನಟಿ, ರಷ್ಯಾ ಮಾಡೆಲ್ ಅಲೆಕ್ಸಾಂಡ್ರಾ ಗೋವಾದಲ್ಲಿರುವ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯ ಕೊಠಡಿಯ ಚಾವಣಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತನಿಖೆ ಆರಂಭವಾಗಿದ್ದು, ಆಕೆ ಆತ್ಮಹತ್ಯೆಯಿಂದ ಸಾವನ್ನಪ್ಪಿರಬಹುದು ಎಂದು ಪೊಲೀಸರು ನಿರೀಕ್ಷಿಸುತ್ತಿದ್ದಾರೆ.

ತಮಿಳು ನಟ ರಾಘವ ಲಾರೆನ್ಸ್ ಮುಖ್ಯ ಪಾತ್ರದಲ್ಲಿ ನಟಿಸಿದ ತಮಿಳು ಚಿತ್ರ ಕಾಂಚನಾ 3 ರಲ್ಲಿ ನಟಿಸಿ ಹೆಚ್ಚು ಹೆಸರು ವಾಸಿಯಾಗಿದ್ದರು. ಉತ್ತರ ಗೋವಾದ ಪಟ್ಟಣವೊಂದರಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆಕೆಯ ನೆರೆಹೊರೆ ಮನೆಯವರು ಕೆಲವು ದಿನಗಳ ಹಿಂದೆ ಅಲೆಕ್ಸಾಂಡ್ರಾ ಬಾಯ್ ಫ್ರೆಂಡ್ ಅವರ ಮನೆಯಿಂದ ಹೊರಬಂದಿದ್ದನ್ನು ನೋಡಿದ್ದಾರೆ. ಅಂದಿನಿಂದ ಅಲೆಕ್ಸಾಂಡ್ರಾ ಬಹಳ ಖಿನ್ನತೆಯಲ್ಲಿದ್ದರು ಮತ್ತು ಮನೆಯಿಂದ ಹೊರಗೆ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.

- Advertisement -

Related news

error: Content is protected !!