ವಿಟ್ಲ: ವಿವಿಧ ಯೋಜನೆಗಳ ಮೂಲಕ 100ಕೋಟಿ ಅನುದಾನವನ್ನು ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರ ನೀಡುವ ಮೂಲಕ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯ ಮಾಡಿದೆ. ಮಾರ್ಚ್ ನಲ್ಲಿ ಮುಗಿಯಬೇಕಾದ ಕಾಮಗಾರಿಗಳು ಕರೊನಾ ಹಾವಳಿಯಿಂದ ವಿಳಂಭವಾಗಿದ್ದು, ಈಗ ವೇಗ ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಸೋಮವಾರ ಮಡಿಯಾಲ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ಅಳಿಕೆ ಶ್ರೀ ಸತ್ಯ ಸಾಯಿ ವಿದ್ಯಾ ಸಂಸ್ಥೆಯವರ ಪ್ರಯತ್ನದಿಂದ ಬಿಡುಗಡೆಯಾದ 3ಕೋಟಿ ವಿಶೇಷ ಅನುದಾನದಲ್ಲಿ ಅಳಿಕೆ ಗ್ರಾಮದ ವಿವಿಧ ಭಾಗಗಳಲ್ಲಿ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ ನಡೆಸಿ ಮಾತನಾಡಿದರು.ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಭಟ್, ವಿದ್ಯಾಸಂಸ್ಥಗಳ ಸಂಚಾಲಕ ಕೆ. ಎಸ್. ಕೃಷ್ಣ ಭಟ್, ಚಂದ್ರಶೇಖರ ಅಳಿಕೆ, ಜಿಲ್ಲಾ ಪಂಚಾಯತಿ ಸದಸ್ಯೆ ಜಯಶ್ರೀ ಕೋಡಂದೂರು, ಬಂಟ್ವಾಳ ತಾಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಜಿಲ್ಲಾ ಪಂಚಾಯತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿನ್ನಪ್ಪ ಗೌಡ, ಅಳಿಕೆ ಗ್ರಾಮ ಪಂಚಾಯಿತಿ ನಿಕಟ ಪೂರ್ವ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಸದಸ್ಯ ಸದಾಶಿವ ಶೆಟ್ಟಿ ಅಳಿಕೆ, ಬಿಜೆಪಿ ಪುಣಚ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಹರಿಪ್ರಸಾದ್ ಯಾದವ್, ಅಳಿಕೆ ಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ ಶೆಟ್ಟಿ ಎರುಂಬು, ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಕಾನ ಈಶ್ವರ ಭಟ್, ಭೂತ್ ಕಾರ್ಯದರ್ಶಿಗಳಾದ ವೆಂಕಟ್ರಮಣ ಮಡಿಯಾಲ, ವಸಂತ ಎರುಂಬು, ಸಹಕಾರಿ ನಿರ್ದೇಶಕರಾದ ಚಂದ್ರನಾಥ ಆಳ್ವ ಮಿತ್ತಳಿಕೆ, ರೂಪೇಶ್ ರೈ ಅಳಿಕೆಗುತ್ತು, ಆನಂದ ಶೆಟ್ಟಿ ಮುಳಿಯ, ದೇವಸ್ಥಾನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವಿ. ಗೋವಿಂದ ಪ್ರಕಾಶ್, ಕಾರ್ಯದರ್ಶಿ ಸುರೇಶ್ ಮಡಿಯಾಲ, ಗುತ್ತಿಗೆದಾರ ಆಂಜನೇಯಪ್ಪ ಮತ್ತಿತರರು ಉಪಸ್ಥಿತರಿದ್ದರು.