Sunday, June 29, 2025
spot_imgspot_img
spot_imgspot_img

ಪುತ್ತೂರು: ಹರಿವೆ ಸೊಪ್ಪು ಪದಾರ್ಥ ಸೇವಿಸಿ ಮೂವರು ಅಸ್ವಸ್ಥ

- Advertisement -
- Advertisement -

ಪುತ್ತೂರು: ಹರಿವೆ ಸೊಪ್ಪು ಪದಾರ್ಥ ಸೇವಿಸಿ ಮೂವರು ಅಸ್ವಸ್ಥಗೊಂಡ ಘಟನೆ ಬೆಳ್ಳಿಪ್ಪಾಡಿ ಗ್ರಾಮದ ಕೈಲಾಜೆ ಎಂಬಲ್ಲಿ ನಡೆದಿದೆ. ಅಸ್ವಸ್ಥಗೊಂಡವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಕೊರಗಪ್ಪ ಗೌಡ ಹಾಗೂ ಅವರ ಪತ್ನಿ ಲಲಿತಾ ಹಾಗೂ ಮನೆಗೆ ಬಂದಿದ್ದ ರಮೇಶ ಅಡ್ಕರಗುರಿ ಆಸ್ಪತ್ರೆಗೆ ದಾಖಲಾದವರು.

ಕೈಲಾಜೆ ಕೊರಗಪ್ಪ ಗೌಡ ಮನೆಯಲ್ಲಿ ಮಧ್ಯಾಹ್ನದ ಊಟಕ್ಕೆ ತಮ್ಮ ಮನೆಯಲ್ಲಿಯೇ ಬೆಳೆದ ಹರಿವೆಯ ಪದಾರ್ಥ ಮಾಡಿದ್ದರು. ಎಂದಿನಂತೆ ಮಧ್ಯಾಹ್ನ ಊಟ ಸೇವಿಸಿದ್ದವರು. ಸಂಜೆಯಾಗುತ್ತಲೇ ಪದಾರ್ಥ ಸೇವಿಸಿದ್ದ ಮೂವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ತೀವ್ರವಾಗಿ ಆಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ.

- Advertisement -

Related news

error: Content is protected !!