Tuesday, July 1, 2025
spot_imgspot_img
spot_imgspot_img

ಅಮೆರಿಕ: ಪತ್ನಿ ಮತ್ತು ಪುತ್ರಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಭಾರತ ಮೂಲದ ವ್ಯಕ್ತಿ!

- Advertisement -
- Advertisement -

ನ್ಯೂಯಾರ್ಕ್: ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮಗಳನ್ನು ಗುಂಡು ಹಾರಿಸಿ ಕೊಂದು, ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಘಟನೆಯ ಕುರಿತು ನ್ಯೂಯಾರ್ಕ್ ಪೊಲೀಸರು ಮಾಹಿತಿ ನೀಡಿದ್ದು, ಆಲ್ಬನಿ ಸಮೀಪದ ಸ್ಕೋಡಕ್ ಪಟ್ಟಣದಲ್ಲಿ ವಾಸವಾಗಿರುವ 57 ವರ್ಷದ ಭೂಪಿಂದರ್ ಸಿಂಗ್, ತನ್ನ 55 ವರ್ಷದ ಪತ್ನಿ ಮನ್‌ಜೀತ್ ಕೌರ್ ಹಾಗೂ 14 ವರ್ಷದ ಮಗಳು ಜಸ್ಲೀನ್ ಕೌರ್‌ರನ್ನು ಬುಧವಾರ ರಾತ್ರಿ ಗುಂಡು ಹಾರಿಸಿ ಕೊಂದು, ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮನೆಯಲ್ಲಿದ್ದ ಇನ್ನೋರ್ವ ಮಹಿಳೆ ರಶ್ಪಾಲ್ ಕೌರ್ ಕೈಗೆ ಗುಂಡಿನ ಗಾಯವಾಗಿದೆ. ಆದರೆ, ಅವರು ಆ ಸಮಯದಲ್ಲಿ ಮನೆಯಿಂದ ಓಡಿ ಹೋಗಿದ್ದು ಅಪಾಯದಿಂದ ಪಾರಾಗಿದ್ದಾರೆ. ರಶ್ಪಾಲ್ ಕೌರ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಹೇಳಿಕೆಯನ್ನು ಪಡೆಯಲು ಪೊಲೀಸರು ಯತ್ನಿಸುತ್ತಿದ್ದಾರೆ.

- Advertisement -

Related news

error: Content is protected !!