ನವದೆಹಲಿ: ದೇಶವಿರೋಧಿ ಘೋಷಣೆಯನ್ನು ಕೂಗಿದ ಆರೋಪವನ್ನು ಹೊಂದಿರುವ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕ ಮಸ್ಕೂರ್ ಅಹಮದ್ ಉಸ್ಮಾನಿಗೆ ಕಾಂಗ್ರೆಸ್ ಬಿಹಾರದ ದರ್ಬಂಗ್ ಜಿಲ್ಲೆಯ ಜಲೆ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಿದೆ.
ಕಾಂಗ್ರೆಸ್ ಈತನಿಗೆ ಟಿಕೆಟ್ ನೀಡಿರುವುದು ಈಗ ದೊಡ್ಡಮಟ್ಟದ ವಿವಾದವನ್ನು ಸೃಷ್ಟಿಸಿದೆ. ಈತ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ. ಅಲ್ಲದೆ ಹಿಂದುತ್ವದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ. ದೇಶ ವಿರೋಧಿ ಘೋಷಣೆ ಕೂಗಿದ ಆರೋಪ ಈತನ ಮೇಲೆ ಇದೆ. ಇದಕ್ಕಾಗಿ ತನ್ನ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸಲಾಗಿತ್ತು.
ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಪಾಕಿಸ್ಥಾನದ ಸಂಸ್ಥಾಪಕ ಮಹಮ್ಮದ್ ಜಿನ್ನಾ ಭಾವಚಿತ್ರವನ್ನು ಈತ ಹಾಕಿದ್ದ. ಈ ಘಟನೆಯು ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಗಿತ್ತು.
ಇದೀಗ ಈತನಿಗೆ ಟಿಕೆಟ್ ನೀಡಿರುವ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಕಾಂಗ್ರೆಸ್ ಕೂಡ ಜಿನ್ನಾ ಬೆಂಬಲಿಗ ಪಕ್ಷವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದೆ.