- Advertisement -
- Advertisement -



ಅನಂತಾಡಿ: ಇತಿಹಾಸ ಪ್ರಸಿದ್ಧ ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆ ಮಾರ್ಚ್ 14 ನೇ ಶುಕ್ರವಾರದಂದು ನಡೆಯಲಿದೆ. ಜಾತ್ರೋತ್ಸವದ ಗೊನೆ ಮುಹೂರ್ತ ಕಾರ್ಯಕ್ರಮ ಮಾರ್ಚ್ 6 ರಂದು ನಡೆಯಿತು. ಬಳಿಕ ಶ್ರೀ ಉಳ್ಳಾಲ್ತಿ ಅಮ್ಮನವರಿಗೆ ಪೂಜಾ ವಿಧಿ ವಿಧಾನಗಳು ನಡೆಯಿತು.

ದಿನಾಂಕ 13/03/2025 ನೇ ಗುರುವಾರ ರಾತ್ರಿ ಭಂಡಾರವೇರಿ 14/03/2025 ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಮೆಚ್ಚಿ ಜಾತ್ರೆ ನಡೆಯಲಿದೆ. ಈ ಸಂದರ್ಭದಲ್ಲಿ ನರೇಂದ್ರ ರೈ ನೇಲ್ತೊಟ್ಟು ಮನೆ, ಅನಂತಾಡಿ ದೊಡ್ಡ ಮನೆತನದವರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
- Advertisement -