Wednesday, July 3, 2024
spot_imgspot_img
spot_imgspot_img

ಅನಂತಾಡಿ: (ಜ.6) ಕರಿಂಕ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬೆಳ್ಳಿಹಬ್ಬ 25ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ

- Advertisement -G L Acharya panikkar
- Advertisement -

ಅನಂತಾಡಿ: ಕರಿಂಕ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ನವೀಕೃತ ಅಶ್ವತ್ಥಕಟ್ಟೆಯಲ್ಲಿ ವೇದಮೂರ್ತಿ ಕೊಬ್ರಿಮಠ ಶ್ರೀಕಾಂತ ಬನ್ನಿಂತಾಯರ ನೇತೃತ್ವದಲ್ಲಿ ಬೆಳ್ಳಿಹಬ್ಬ, 25ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ಹಾಗೂ ನವೀಕರಣಗೊಂಡ ಅಶ್ವತ್ಥಕಟ್ಟೆಯ ಪೂಜೆ ನಡೆಯಲಿದೆ.

ಬೆಳಿಗ್ಗೆ 9:30 ಕ್ಕೆ ನವೀಕರಣಗೊಂಡ ಅಶ್ವತ್ಥಕಟ್ಟೆಯ ಪೂಜೆ ನಡೆದು, ಬಳಿಕ ಸಂಜೆ 5:00 ಕ್ಕೆ ಶನೀಶ್ವರ ಪೂಜೆ ಪ್ರಾರಂಭಗೊಳ್ಳಲಿದೆ ನಂತರ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮವನ್ನು ಉರ್ದಿಲಗುತ್ತು ರಾಮಪ್ರಸಾದ್ ರೈ ಉದ್ಘಾಟಿಸಲಿದ್ದಾರೆ. ನೆಲ್ತೋಟ್ಟು ಮನೆ ಬಿ. ನರೇಂದ್ರ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಬಂಟ್ವಾಳ ವಿಧಾನಸಭಾ ಕ್ಷೇತ್ರ ಶಾಸಕ ರಾಜೇಶ್ ನಾೖಕ್‌ ಉಳಿಪಾಡಿಗುತ್ತು, ಬಂಟ್ವಾಳ ವಿಧಾನಸಭಾ ಕ್ಷೇತ್ರ ಮಾಜಿ ಸಚಿವ ಬಿ. ರಮಾನಾಥ ರೈ, ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಅಶೋಕ್ ರೈ, ಮಂಗಳೂರು ಗುರುಬೆಳದಿಂಗಳು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪದ್ಮರಾಜ್ ಆರ್‍, ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಜಾತ ಸುರೇಶ್ ಪೂಜಾರಿ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶಮಿತ ಡಿ. ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಾರ್ಶ ಸರಕಾರಿ ಪ್ರೌಢಶಾಲಾ ಅಧ್ಯಾಪಕ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಗೋಪಾಲಕೃಷ್ಣ ನೇರಳಕಟ್ಟೆ ಸನ್ಮಾನ ಸ್ವೀಕರಿಸಲಿದ್ದಾರೆ.

ರಾತ್ರಿ 8:00ರಿಂದ ಶ್ರೀ ಶನೀಶ್ವರ ಪೂಜೆಯ 25ನೇ ವರ್ಷದ ಬೆಳ್ಳಿಹಬ್ಬ ಪ್ರಯುಕ್ತ ಅಭಿನಯ ಕಲಾವಿದರು ಉಡುಪಿ ಇವರ ಕುತೂಹಲಭರಿದ ಹಾಸ್ಯಮಯ ನಾಟಕ ಒಂದು ಸುಂದರ ಪ್ರೇಮ ಕಥೆ “ಶಾಂಭವಿ” ನಡೆಯಲಿದೆ.

- Advertisement -

Related news

error: Content is protected !!