- Advertisement -
- Advertisement -
ಅನಂತಾಡಿ: ಶ್ರೀ ಉಳ್ಳಾಳ್ತಿ ದೇವಸ್ಥಾನದಲ್ಲಿ ವಾರ್ಷಿಕ “ಮೆಚ್ಚಿ ಜಾತ್ರೆ” ಮಾರ್ಚ್ 2 ಮತ್ತು 3, 2026 ರಂದು ನಡೆಯಲಿದ್ದು, ಫೆ. 25ರ ಇಂದು ಬೆಳಿಗ್ಗೆ ಕೊಂಬಿಲ ಬಳಿ ಇರುವ ತೋಟದಲ್ಲಿ ಗೊನೆ ಮುಹೂರ್ತ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ನರೇಂದ್ರ ರೈ ನೆಲ್ತೊಟ್ಟು ಮನೆ , ಅನಂತಾಡಿ ದೊಡ್ಡಮನೆ ಎಂ ಮೋಹನ್ ಪೈ, ಸೇರಿದಂತೆ ಊರ ಹತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.
ಮಾರ್ಚ್ 3ರಂದು ಬೆಳಿಗ್ಗೆ 9.00 ಗಂಟೆಗೆ ಮೆಚ್ಚಿ ಜಾತ್ರೆ ಹಾಗೂ ಮಹಾಪೂಜೆ ನಡೆಯಲಿವೆ.ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿದ್ದು ಭಕ್ತಾಧಿಗಳೆಲ್ಲರೂ ಕುಟುಂಬ ಸಮೇತ ಆಗಮಿಸಿ ದೇವಿಯ ದರ್ಶನ ಪಡೆಯುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -








