Sunday, July 6, 2025
spot_imgspot_img
spot_imgspot_img

ಅನುಷ್ಕಾ ಶೆಟ್ಟಿ , ಮಹೇಶ್ ಬಾಬುಗೆ ಅಕ್ಟೋಬರ್ 7 ವಿಶೇಷ ದಿನ.

- Advertisement -
- Advertisement -

ಹೈದರಾಬಾದ್: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತು ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿಗೆ ಅಕ್ಟೋಬರ್ 7 ವಿಶೇಷವಾದ ದಿನವಾಗಿದೆ. ಹೀಗಾಗಿ ಇಬ್ಬರು ಸೋಶಿಯಲ್ ಮೀಡಿಯಾದ ಮೂಲಕ ಬಗ್ಗೆ ತಮ್ಮ ಅಭಿಮಾನಿಗಳ ಜೊತೆ ಸಂತಸ ಹಂಚಿಕೊಂಡಿದ್ದಾರೆ.

ಅಕ್ಟೋಬರ್ 7 , ಮಹೇಶ್ ಬಾಬು ಮತ್ತು ಅನುಷ್ಕಾ ಶೆಟ್ಟಿ ಅಭಿನಯದ ಸೂಪರ್ ಹಿಟ್ ‘ಖಲೇಜಾ’ ಸಿನಿಮಾ ರಿಲೀಸ್ ಆದ ದಿನ. ಈ ಸಿನಿಮಾ ರಿಲೀಸ್ ಆಗಿ 10 ವರ್ಷಗಳಾಗಿದೆ. ಅಕ್ಟೋಬರ್ 7, 2010ರಲ್ಲಿ ಈ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬಂದಿದ್ದು, ಸೂಪರ್ ಹಿಟ್ ಆಗಿತ್ತು. ಈ ಸಿನಿಮಾ ಮೂಲಕ ಮೊದಲ ಬಾರಿಗೆ ಮಹೇಶ್ ಬಾಬು ಮತ್ತು ಅನುಷ್ಕಾ ಇಬ್ಬರು ಅಭಿಮಾನಿಗಳ ಮುಂದೆ ಬಂದಿದ್ದು, ಇಬ್ಬರ ಕಾಂಬಿನೇಷನ್‍ಗೆ ಅಭಿಮಾನಿಗಳು ಫಿದಾ ಆಗಿದ್ದರು.

ಚಿತ್ರತಂಡ ‘ಖಲೇಜಾ’ ಸಿನಿಮಾದ 10 ವರ್ಷಗಳ ಸಂಭ್ರಮವನ್ನು ಆಚರಿಸುತ್ತಿದೆ. ಈ ಸಂತಸವನ್ನು ನಟ ಮಹೇಶ್ ಬಾಬು ಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.“ಖಲೇಜಾ ಸಿನಿಮಾ ಬಿಡುಗಡೆಯಾಗಿ 10 ವರ್ಷ ಪೂರೈಸಿದೆ. ನಟನಾಗಿ ನನ್ನನ್ನು ಮರುಶೋಧಿಸಿದ ಸಿನಿಮಾವಿದು. ಹೀಗಾಗಿ ಈ ಚಿತ್ರ ವಿಶೇಷವಾಗಿ ಉಳಿಯುತ್ತದೆ. ನನ್ನ ಸ್ನೇಹಿತ ಮತ್ತು ನಿರ್ದೇಶಕ ತ್ರಿವಿಕ್ರಮ್‍ಗೆ ಧನ್ಯವಾದಗಳು. ಮುಂದಿನ ಸಿನಿಮಾಗಾಗಿ ಎದುರು ನೋಡುತ್ತಿದ್ದೇನೆ. ಶೀಘ್ರದಲ್ಲೇ” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಸಿನಿಮಾದ ವಿಡಿಯೋ ಶೇರ್ ಮಾಡಿದ್ದಾರೆ.

ನಟಿ ಅನುಷ್ಕಾ ಶೆಟ್ಟಿ ಕೂಡ ಮಹೇಶ್ ಬಾಬು ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ್ದು, “ಈ ಸಿನಿಮಾದ ಸಾಕಷ್ಟು ನೆನಪುಗಳಿವೆ. ಮಹೇಶ್ ಬಾಬು, ತ್ರಿವಿಕ್ರಮ್ ಅವರಿಗೆ ಧನ್ಯವಾದಗಳು” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

- Advertisement -

Related news

error: Content is protected !!