Monday, May 6, 2024
spot_imgspot_img
spot_imgspot_img

ಅಪಾರ್ಟ್ ಮೆಂಟ್ ನಲ್ಲಿ ಸಿಲಿಂಡರ್ ಬ್ಲಾಸ್ಟ್​; ನೋಡ ನೋಡುತ್ತಿದ್ದಂತೆ ಬೆಂಕಿ ತಗುಲಿ ಮಹಿಳೆ ಸಜೀವ ದಹನ

- Advertisement -G L Acharya panikkar
- Advertisement -

ಬೆಂಗಳೂರು: ನಗರದ ಅನೇಕಲ್​​ ಅಪಾರ್ಟ್​ಮೆಂಟ್​​ನಲ್ಲಿ ಗ್ಯಾಸ್​​ ಸಿಲಿಂಡರ್​​ ಸಿಡಿದ ಪರಿಣಾಮ ಓರ್ವ ಸಾವನ್ನಪ್ಪಿದ್ದಾನೆ. ಅಲ್ಲದೇ ನೋಡ ನೋಡುತ್ತಿದ್ದಂತೆಯೇ ಮಹಿಳೆಗೆ ಬೆಂಕಿ ತಗುಲಿದ್ದು, ಪ್ಲಾಟ್​​ನಿಂದ ಹೊರಬರಲಾಗದೆ ಮಹಿಳೆ ಪರದಾಡುತ್ತಿದ್ದ ದೃಶ್ಯ ಸ್ಥಳೀಯರ ಮೊಬೈಲ್​​ನಲ್ಲಿ ಸೆರೆಯಾಗಿದ್ದು, ಕ್ಷಣಾರ್ದದಲ್ಲಿ ಬೆಂಕಿಯಲ್ಲಿ ಮಹಿಳೆ ಬೆಂದು ಹೋಗಿದ್ದಾರೆ.

ಹಲವರು ಪ್ಲಾಟ್​​ನಲ್ಲೇ ಸಿಕ್ಕಿಹಾಕಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಮೂರು ಆಗ್ನಿಶಾಮಕ ದಳದ ವಾಹನಗಳು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದಾರೆ. ಅಪಾರ್ಟ್​​ಮೆಂಟ್​​ನಲ್ಲಿ ಸಿಲುಕಿದ್ದ ಮೂವರನ್ನು ಈಗಾಗಲೇ ರಕ್ಷಣೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಬೆಂಕಿಯ ಕೆನ್ನಾಲಿಗೆ ಅಪಾರ್ಟ್​​ಮೆಂಟ್​​ನ ಮೂರು ಪ್ಲಾಟ್​​​​​ ಗಳಿಗೆ ಬೆಂಕಿ ತಲುಗಿದೆ ಎನ್ನಲಾಗಿದೆ.

- Advertisement -

Related news

error: Content is protected !!