Sunday, January 24, 2021

ಸಂಪುಟ ಸರ್ಜರಿಗೆ ಮುನ್ನುಡಿಯಾಗಿ ವಿವಿಧ ನಿಗಮಗಳ ಅಧ್ಯಕ್ಷರ ನೇಮಕ

ಸಂಪುಟ ಸರ್ಜರಿಗೆ ಮುನ್ನುಡಿ ಎಂಬಂತೆ ರಾಜ್ಯ ಸರ್ಕಾರ ಖಾಲಿಯಿರುವ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನ ಭರ್ತಿ ಮಾಡಿದೆ. ಈ ಮೂಲಕ ಮುಂದೆ ಬರಬಹುದಾಗಿದ್ದ ಅಪಸ್ವರಕ್ಕೆ ಕಡಿವಾಣ ಹಾಕಿದೆ ಎನ್ನಲಾಗುತ್ತಿದೆ.

ಬಿ ಜೆ ಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸಭೆ ನಡೆಸಿದ ಬೆನ್ನಲ್ಲೇ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದ ಅಂತಿಮ ಪಟ್ಟಿ ರೆಡಿಯಾಗಿದೆ.

ತಿಪಟೂರಿನ ಶಾಸಕ ಬಿ.ಸಿ.ನಾಗೇಶ್​ಗೆ ಕಾರ್ಮಿಕ ಕಲ್ಯಾಣ ಮಂಡಳಿ ಅಧ್ಯಕ್ಷ ಸ್ಥಾನ, ಅರಣ್ಯ ಅಭಿವೃದ್ಧಿ ‌ನಿಗಮದ ಅಧ್ಯಕ್ಷ ಸ್ಥಾನಕ್ಕೆ ತಾರಾ ಅನುರಾಧ, ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಶಿರಾ ಕ್ಷೇತ್ರದ ಬಿ.ಕೆ. ಮಂಜುನಾಥ್​​​, ಕೆ.ವಿ. ನಾಗರಾಜ್​​ಗೆ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತದ ಅಧ್ಯಕ್ಷ ಸ್ಥಾನ, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತಕ್ಕೆ ಸವಿತಾ ವಿಶ್ವನಾಥ್ ಅಮರ್ ಶೆಟ್ಟಿ, ನವೀಕರಿಸಬಹುದಾದ ಇಂಧನ ನಿಗಮಕ್ಕೆ ಚಂದು ಪಾಟೀಲ್​​, ತಿಪ್ಪೇಸ್ವಾಮಿಗೆ ಕಾಡಾ ನಿಗಮದ ಅಧ್ಯಕ್ಷ ಸ್ಥಾನ, ಚಿಕ್ಕನಾಯಕನಹಳ್ಳಿಯ ಕಿರಣ್ ಕುಮಾರ್​ಗೆ ಜೈವಿಕ ತಂತ್ರಜ್ಞಾನ ‌ನಿಗಮದ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ.

- Advertisement -

MOST POPULAR

HOT NEWS

Related news

error: Content is protected !!