


ಪುತ್ತೂರು : ಬಿಜೆಪಿ ಮಹಿಳಾ ಮೋರ್ಚಾ ಪುತ್ತೂರು ನಗರ ಮಂಡಲ ಪದಾಧಿಕಾರಿಗಳಾಗಿ ಮಹಿಳಾ ಮೋರ್ಚಾ ನಗರ ಮಂಡಲ ಅಧ್ಯಕ್ಷರಾದ ಸ್ವರ್ಣಲತಾ ಹೆಗ್ಡೆ ರವರು ನಿಯುಕ್ತಿಗೊಳಿಸಿದ್ದಾರೆ.
ಉಪಾಧ್ಯಕ್ಷರಾಗಿ ಪೂರ್ಣಿಮ ಬಲ್ನಾಡು, ಸುಪ್ರಭ ಕೇಶವ,ಮೋಹಿನಿ ವಿಶ್ವನಾಥ, ವಿಮಲ ಸುರೇಶ್ ಪಡ್ಡಯೂರು, ಕಾರ್ಯದರ್ಶಿಯಾಗಿ ವೀಣಾಕ್ಷಿ ಪೂಜಾರಿ,ವನಿತ ಬಂಗೇರ, ಶೈಲಜ ಕೇಪುಳ, ಸರೋಜಿನಿ, ಕೋಶಾಧಿಕಾರಿಯಾಗಿ ಸುಮತಿ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ವೀಣಾ ಆಚಾರ್ಯ, ಪ್ರೇಮ ಕಿಶೋರ್,ಸುಜಾತ,ರಾಜೀವಿ ಕುಬುಲಾಜೆ, ಹರಿಣಾಕ್ಷಿ ತೆಂಕಿಲ, ಹೇಮಲತಾ ಬಡಾವು, ಮಮತ, ದಿವ್ಯ ಮನೋಹರ, ಚಂದ್ರಿಕಾ, ರಾಜೀವಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರು ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ಶಿವಕುಮಾರ್ ಪಿಬಿ ಕಲ್ಲಿಮಾರು , ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿದ್ಯಾ ಆರ್ ಗೌರಿ , ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ , ಬಿಜೆಪಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್,ನಗರ ಮಂಡಲ ಉಪಾಧ್ಯಕ್ಷರು ಯುವರಾಜ್ ಕೆ ಪೆರಿಯಾತ್ತೊಡಿ,ಬಿಜೆಪಿ ಮಹಿಳಾ ಮೋರ್ಚಾ ನಗರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಜಯಲಕ್ಷ್ಮಿ ಶಗ್ರಿತ್ತಾಯ , ಸುನೀತಾ , ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ವಿಮಲ ಸುರೇಶ್, ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು,ಕಾರ್ಯಕರ್ತರು ಉಪಸ್ಥಿತರಿದ್ದರು…