- Advertisement -
- Advertisement -



ಸುಳ್ಯ: ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸವಾರರು ಗಾಯಗೊಂಡ ಘಟನೆ ಅರಂತೋಡು ಮುಖ್ಯ ರಸ್ತೆಯಲ್ಲಿ ತೊಡಿಕಾನ ತಿರುವು ಸಮೀಪ ನಡೆದಿದೆ.
ಅರಂತೋಡು ಮುಖ್ಯ ರಸ್ತೆಯಲ್ಲಿ ತೊಡಿಕಾನ ತಿರುವು ಸಮೀಪ ಸುಳ್ಯದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಬೈಕ್ ಮತ್ತು ಮಡಿಕೇರಿ ಕಡೆಯಿಂದ ಸುಳ್ಯ- ಕಡೆಗೆ ಬರುತ್ತಿದ್ದ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಹೊಡೆದಿದೆ ಪರಿಣಾಮ ಮೂವರು ಸವಾರರು ಗಾಯಗೊಂಡಿದ್ದು ಗಾಯಾಳು ಸುಳ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಒಬ್ಬ ಸವಾರನ ಕಾಲಿನ ಹೆಬ್ಬೆರಳು ತುಂಡಾಗಿ ರಸ್ತೆಯಲ್ಲಿ ಬಿದ್ದುಕೊಂಡಿತು. ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದರು. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬೆರಬೇಕಿದೆ.
- Advertisement -