Thursday, August 13, 2026
spot_imgspot_img
spot_imgspot_img

ಬದಿಯಡ್ಕ : ಖಾಸಗಿ ಬಸ್ಸಿನಲ್ಲಿ ಹಿಂದೂ ವಿದ್ಯಾರ್ಥಿನಿಗೆ ಅನ್ಯಕೋಮಿನ ವ್ಯಕ್ತಿಯಿಂದ ಕಿರುಕುಳ ಪ್ರಕರಣ: ಆರೋಪಿ ಬಂಧನ

- Advertisement -
- Advertisement -

ಬದಿಯಡ್ಕ: ಖಾಸಗಿ ಬಸ್ಸಿನಲ್ಲಿ ಹಿಂದೂ ವಿದ್ಯಾರ್ಥಿನಿಗೆ ಕಿರುಕುಳ ನೀಡಲು ಯತ್ನಿಸಿದ ಪ್ರಕರಣದಲ್ಲಿ ಬಂಧಿತ ಆರೋಪಿಗೆ ರಿಮಾಂಡ್ ವಿಧಿಸಲಾಗಿದೆ.

ಉಪ್ಪಿನಂಗಡಿ ಮೂಲ ನಿವಾಸಿ ಇಬ್ರಾಹಿಂ ಪುತ್ರ ಅಬ್ದುಲ್ ಕರೀಂ(40) ಬಂಧಿತನಾಗಿ ಇದೀಗ ರಿಮಾಂಡಿಗೊಳಗಾದ ಆರೋಪಿ.

ಈತ ಉಸ್ತಾದ್ ಆಗಿದ್ದಾನೆಂದು ತಿಳಿದುಬಂದಿದೆ. ಶನಿವಾರ ಬೆಳಗ್ಗೆ ಕುಂಬಳೆಯಿಂದ ಬದಿಯಡ್ಕ ಭಾಗಕ್ಕೆ ಬರುತ್ತಿದ್ದ ಖಾಸಗಿ ಬಸ್ಸು ಸೀತಾಂಗೋಳಿ ಸ್ಟಾಪ್ ದಾಟಿದ ಕೂಡಲೇ ಆರೋಪಿ ಕಿರುಕುಳ ನೀಡಲೆತ್ನಿದ್ದನು. ವಿದ್ಯಾರ್ಥಿನಿ ಪ್ರತಿಭಟಿಸಿದಾಗ ಇತರ ಪ್ರಯಾಣಿಕರು ಮದ್ಯ ಪ್ರವೇಶಿಸಿದರು. ಅನಂತರ ಹಿಂದು ಸಂಘಟನಾ ಕಾರ್ಯಕರ್ತರ ಸಹಾಯದೊಂದಿಗೆ ಆರೋಪಿಯನ್ನು ಬದಿಯಡ್ಕ ಪೊಲೀಸರಿಗೆ ಒಪ್ಪಿಸಲಾಯಿತು. ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು.

- Advertisement -

Related news

error: Content is protected !!