Sunday, June 29, 2025
spot_imgspot_img
spot_imgspot_img

ಅಸ್ಸಾಂನಲ್ಲಿ ಅಲ್‌ ಖೈದಾ ಉಗ್ರ ಅರೆಸ್ಟ್‌..!

- Advertisement -
- Advertisement -

ದಿಸ್ಪುರ್: ಅಲ್ ಖೈದಾ ಉಗ್ರರ ಸಂಪರ್ಕದಲ್ಲಿದ್ದ ವ್ಯಕ್ತಿಯೊಬ್ಬನನ್ನು ಅಸ್ಸಾಂ ವಿಶೇಷ ಕಾರ್ಯಾಚರಣೆ ಪಡೆ ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿ ಬಂಧಿಸಿದೆ.

ಬಂಧಿತ ಆರೋಪಿಯನ್ನು ಗಾಜಿ ರೆಹಮಾನ್ (35) ಎಂದು ಗುರುತಿಸಲಾಗಿದೆ.

ಆರೋಪಿ ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಸಂಘಟನೆ ಅನ್ಸರುಲ್ಲಾ ಬಾಂಗ್ಲಾ ತಂಡದ (ಎಬಿಟಿ) ಪ್ರಮುಖ ಸದಸ್ಯ ಎಂದು ತಿಳಿದು ಬಂದಿದೆ. ಆತ ಅಲ್‌ ಖೈದಾ ಉಗ್ರರ ಸಂಪರ್ಕದಲ್ಲಿದ್ದ. ಅಸ್ಸಾಂನ ವಿಶೇಷ ಕಾರ್ಯಪಡೆ ಆಪರೇಷನ್ ಪರ್ಘಾಟ್ ಅಡಿಯಲ್ಲಿ ಭಯೋತ್ಪಾದಕರನ್ನು ಬಂಧಿಸಲು ಕಾರ್ಯಾಚರಣೆ ನಡೆಸುತ್ತಿದೆ. ಅದರ ಭಾಗವಾಗಿ ರೆಹಮಾನ್ ಬಂಧನವಾಗಿದೆ.

ಭಯೋತ್ಪಾದನಾ ಘಟಕದ ಒಟ್ಟು 12 ಸಹಚರರನ್ನು ಇದುವರೆಗೆ ಬಂಧಿಸಲಾಗಿದೆಡಿ.17 ಮತ್ತು 18ರ ಮಧ್ಯರಾತ್ರಿ, ಭಯೋತ್ಪಾದನಾ ಘಟಕದ 8 ಸದಸ್ಯರನ್ನು ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಬಂಧಿಸಲಾಗಿತ್ತು. ಅವರು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ನಿರ್ವಾಹಕರಾಗಿದ್ದರು ಎಂದು ವರದಿಯಾಗಿದೆ.

- Advertisement -

Related news

error: Content is protected !!