Thursday, October 10, 2024
spot_imgspot_img
spot_imgspot_img

ಹೆಸರಿಗೆ ತಕ್ಕಂತೆ ಅಮೃತವೆಂಬ “ಅಮೃತಬಳ್ಳಿ”ಯಲ್ಲಿದೆ ರೋಗ ನಿರೋಧಕ ಶಕ್ತಿಯ ಗುಣ

- Advertisement -
- Advertisement -

ಇದೊಂದು ಆಯುರ್ವೇದದ ಅದ್ಭುತವಾದ ಗಿಡಮೂಲಿಕೆಯಾಗಿದೆ. ಸಾಂಕ್ರಾಮಿಕ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಅಮೃತ ಬಳ್ಳಿ ಕಷಾಯವನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯಕಾರಿ, ಸುಲಭವಾಗಿ ಸಿಗುವ ಅಮೃತ ಬಳ್ಳಿ ಸೇವನೆ ಬಗ್ಗೆ ಸರಿಯಾದ ವಿಧಾನ ತಿಳಿದುಕೊಳ್ಳುವ ಅಗತ್ಯವಿದೆ.

ಅಮೃತ ಬಳ್ಳಿಯು ಮಾನವನಿಗೆ ದೇವರು ನೀಡಿರುವ ಅಮೃತವಾಗಿದ್ದು, ಹಲವಾರು ರೋಗಗಳು ಬಾರದಂತೆ ನಿಯಂತ್ರಿಸುತ್ತದೆ. ಒಟ್ಟಾರೆ ಇದು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಶಕ್ತಿಯ ಕೇಂದ್ರವಾಗಿದ್ದು, ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ. ನಿಮ್ಮ ಕೋಶಗಳನ್ನು ಆರೋಗ್ಯಕರವಾಗಿರಿಸಿ ರೋಗಗಳನ್ನು ತೊಡೆದು ಹಾಕುತ್ತದೆ. ಇದು ರಕ್ತವನ್ನು ಶುದ್ಧೀಕರಿಸಿ, ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತದೆ.

ಅಮೃತ ಬಳ್ಳಿಯನ್ನು 3 ರೀತಿಯಲ್ಲಿ ಸೇವಿಸಬಹುದು. ಕಾಂಡ, ಬೇರು, ಎಲೆಗಳಲ್ಲೂ ಔಷಧಿ ಗುಣವಿದೆ. ಅಮೃತ ಬಳ್ಳಿ ಕಾಂಡವನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಚೆನ್ನಾಗಿ ಕುದಿಸಿ. ನಾಲ್ಕು ಲೋಟ ನೀರನ್ನು ಒಂದು ಲೋಟ ನೀರಾಗುವವರೆಗೆ ಕುದಿಸಿ ನೀರು ಒಂದು ನೋಟವಾದ ಮೇಲೆ ಬಿಡಿ. ಕಾಲು ಲೋಟ ನೀರನ್ನು ಪ್ರತಿ ದಿನ ಸೇವಿಸಬೇಕು.

ಅಮೃತ ಬಳ್ಳಿ ಕಷಾಯವನ್ನು ಕುಡಿಯಲು ಬಯಸಿದರೆ ಇದಕ್ಕಾಗಿ ಅಮೃತ ಬಳ್ಳಿ ತುಂಡು, 4-5 ತುಳಸಿ ಎಲೆಗಳು, 2 ಕರಿಮೆಣಸು, ಸ್ವಲ್ಪ ಅರಿಶಿನ, ಸ್ವಲ್ಪ ಶುಂಠಿ, ಸ್ವಲ್ಪ ಅಶ್ವಗಂಧ ಹಾಕಿ ಕಷಾಯ ಮಾಡಿ. ಒಂದು ಬಾಣಲೆಯಲ್ಲಿ 2 ಗ್ಲಾಸ್ ನೀರನ್ನು ಬಿಸಿ ಮಾಡಿ ಅದರಲ್ಲಿ ಈ ಪುಡಿ ಮಾಡಿದ ವಸ್ತುವನ್ನು ಹಾಕಿ. ಇದನ್ನು ಕಡಿಮೆ ಶಾಖದಲ್ಲಿ ಕುದಿಸಿ. ನೀರು ಒಂದು ಲೋಟವಾದ್ಮೇಲೆ ಫಿಲ್ಟರ್ ಮಾಡಿ ನಂತರ ಕುಡಿಯಿರಿ.

ಅಮೃತ ಬಳ್ಳಿ ಅನೇಕ ಸ್ಥಳಗಳಲ್ಲಿ ಕಂಡು ಬರುವುದಿಲ್ಲ. ಹಾಗಾಗಿ ಅಮೃತ ಬಳ್ಳಿ ಮಾತ್ರೆಗಳನ್ನು ಸೇವಿಸಬಹುದು, ಮಗುವಿಗೆ 5 ರಿಂದ 10 ವರ್ಷವಾಗಿದ್ದರೆ, ಅವರಿಗೆ ಅರ್ಧ ಟ್ಯಾಬ್ಲೆಟ್ ನೀಡಿ. ಅದಕ್ಕಿಂತ ದೊಡ್ಡವರಾಗಿದ್ದರೆ ಒಂದು ಮಾತ್ರೆ ನೀಡಿ. ವಯಸ್ಕರು ದಿನದಲ್ಲಿ 2 ಮಾತ್ರೆಗಳನ್ನು ತೆಗೆದುಕೊಳ್ಳಬಹುದಾಗಿದೆ.

- Advertisement -

Related news

error: Content is protected !!