- Advertisement -
- Advertisement -



ಪುತ್ತೂರು: ರೈ ಎಸ್ಟೇಟ್ & ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ‘ಅಶೋಕ ಜನಮನ 2026’ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾದ 1 ಲಕ್ಷ ಜನರಿಗೆ ವಸ್ತ್ರ ವಿತರಣೆ ವೇದಿಕೆ ಉದ್ಘಾಟನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು
ಮಾನ್ಯ ಶಾಸಕರ ತಾಯಿ ಗಿರಿಜಾ ಎಸ್. ರೈ ಅವರು ದೀಪ ಪ್ರಜ್ವಲನೆಯ ಮೂಲಕ ವಸ್ತ್ರ ವಿತರಣೆಯ ವೇದಿಕೆಯನ್ನು ಉದ್ಘಾಟಿಸಿದರು. ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಮಧ್ಯಾಹ್ನದ ಅನ್ನಭೋಜನಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ಪೂಜೆ ಮಾಡಲಾಯಿತು. ನಂತರ ಸಭಾ ಕಾರ್ಯಕ್ರಮ ಆರಂಭವಾಯಿತು.ಆರಂಭದಲ್ಲಿ ವೈದಿಕಾ ಪ್ರಾರ್ಥನೆ ಹಾಗೂ ಶ್ರೀಮತಿ ರೇಣುಕಾ ರೈ ಅವರ ತಂಡದಿಂದ ಗಣಪತಿ ಸ್ತುತಿ ನಡೆಯಿತು. ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರಿಗೆ ಗೌರವದ ಶಾಲನ್ನು ಹಾಕುವ ಮೂಲಕ ಮಾನ್ಯ ಶಾಸಕ ಅಶೋಕ್ ಕುಮಾರ್ ರೈ ಅವರು ಸ್ವಾಗತಿಸಿದರು.
- Advertisement -







