Saturday, June 28, 2025
spot_imgspot_img
spot_imgspot_img

ಲಂಡನ್‌ನಲ್ಲಿ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಮೇಲೆ ದಾಳಿಗೆ ಯತ್ನ

- Advertisement -
- Advertisement -

ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೇಲೆ ಲಂಡನ್‌ನಲ್ಲಿ ಧಾಳಿಗೆ ಯತ್ನಿಸಿದ ಬಗ್ಗೆ ವರದಿಯಾಗಿದೆ.

ಯುನೈಟೆಡ್ ಕಿಂಗ್ ಡಮ್ ನ ವಿದೇಶಾಂಗ ಸಚಿವ ಡೇವಿಡ್ ಲ್ಯಾಮಿ ಅವರ ಕಚೇರಿಯಾದ ಚೀವನಿಂಗ್ ಹೌಸ್ ನಲ್ಲಿ ಸಭೆಯೊಂದರಲ್ಲಿ ಪಾಲ್ಗೊಳ್ಳಬೇಕಿತ್ತು. ಈ ವೇಳೆ ಅವರ ಮೇಲೆ ದಾಳಿಗೆ ಯತ್ನಿಸಲಾಗಿದೆ.

ನಿಗದಿತ ಸ್ಥಳಕ್ಕೆ ಅವರು ಆಗಮಿಸುವ ಮೊದಲೇ ಅಲ್ಲಿಗೆ ಖಲಿಸ್ತಾನಿ ಬೆಂಬಲಿಗರ ಗುಂಪು ಆಗಮಿಸಿ ಪ್ರತಿಭಟನೆಯಲ್ಲಿ ನಿರತವಾಗಿತ್ತು. ಜೈಶಂಕರ್ ಅವರ ಕಾರು ಅಲ್ಲಿಗೆ ಬರುತ್ತಿದ್ದಂತೆ ಖಲಿಸ್ತಾನಿ ಬೆಂಬಲಿಗರು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರು. ಈ ವೇಳೆ ಅಲರ್ಟ್ ಆದ ಭದ್ರತಾ ಸಿಬ್ಬಂದಿ ಭಾರೀ ಬಿಗಿಭದ್ರತೆಯಲ್ಲಿ ಜೈಶಂಕ‌ರ್ ಅವರನ್ನು ಚೀವನಿಂಗ್ ಹೌಸ್ ನೊಳಕ್ಕೆ ಕರೆದೊಯ್ದಿದ್ದಾರೆ. ಬಳಿಕ ಅಲ್ಲಿ ಗಣ್ಯರ ಜೊತೆ ಸಭೆ ನಡೆಸಿದರು.

ಕಾರು ಇಳಿದು ಭಾರೀ ಭದ್ರತೆಯೊಂದಿಗೆ ಸಭೆಗೆ ಹೋಗಿದ್ದ ಜೈಶಂಕರ್ ವಾಪಾಸ್ಸಾಗಿ ತಮ್ಮ ಕಾರು ಏರಲು ಅಣಿಯಾಗುತ್ತಿದ್ದಂತೆ ಪ್ರತಿಭಟನಾಕಾರರ ಗುಂಪಿನಲ್ಲಿದ್ದ ಒಬ್ಬಾತ ಭದ್ರತೆಯನ್ನು ಭೇದಿಸಿಕೊಂಡು ಜೈಶಂಕರ್ ಕಾರಿನತ್ತ ನುಗ್ಗಿದ್ದಾನೆ. ಕಾರಿನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ.
ಜೈಶಂಕ‌ರ್ ಮೇಲೆ ಹಲ್ಲೆ ನಡೆಸಲು ಆಗದಿದ್ದಾಗ ತನ್ನ ಕೈಯ್ಯಲ್ಲಿದ್ದ ಭಾರತ ಧ್ವಜವನ್ನು ಹರಿದು ಹಾಕಿ, ಅಪಮಾನ ಮಾಡಿದ್ದಾನೆ ಎಂಬುದಾಗಿ ವರದಿಯಾಗಿದೆ. ತಕ್ಷಣ ಕಾರ್ಯಪ್ರವೃತರಾದ ಆತನನ್ನು ವಶಕ್ಕೆ ಪಡೆದಿದ್ದಾರೆ.

- Advertisement -

Related news

error: Content is protected !!