Saturday, April 20, 2024
spot_imgspot_img
spot_imgspot_img

ಆಗಸ್ಟ್ ಅಂತ್ಯದವರೆಗೆ ಏರ್ ಇಂಡಿಯಾ ವಿಮಾನಕ್ಕೆ ಹಾಂಕಾಂಗ್ ನಿಷೇಧ

- Advertisement -G L Acharya panikkar
- Advertisement -

ಕೊರೊನಾ ಸೋಂಕು ಹಿನ್ನಲೆಯಲ್ಲಿ ಆಗಸ್ಟ್ ಅಂತ್ಯದವರೆಗೆ ಏರ್ ಇಂಡಿಯಾ ವಿಮಾನಗಳ ಪ್ರವೇಶವನ್ನು ಹಾಂಕಾಂಗ್ ನಿಷೇಧಿಸಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಹಾಂಕಾಂಗ್ ಸರ್ಕಾರ ಕಳೆದ ಜುಲೈ ತಿಂಗಳಲ್ಲಿ ಕೆಲ ನಿಯಮ ಹೊರಡಿಸಿತ್ತು. ಈ ನಿಯಮದ ಪ್ರಕಾರ , ಹಾಂಕಾಂಗ್ ಗೆ ಬರುವ ವಿಮಾನ ಪ್ರಯಾಣಿಕರು 72 ಗಂಟೆಗಳ ಮೊದಲು ಕೊರೊನಾ ಪರೀಕ್ಷೆ ಮಾಡಿಸಿ ನೆಗೆಟಿವ್ ರಿಪೋರ್ಟ್ ಪಡೆದಿರಬೇಕು. ನೆಗೆಟಿವ್ ಬಂದಿರುವ ಪ್ರಮಾಣಿಕರಿಗೆ ಮಾತ್ರ ಹಾಂಕಾಂಗ್ ಪ್ರವೇಶ. ಇದಲ್ಲದೇ ಹಾಂಕಾಂಗ್ ಪ್ರವೇಶಿಸಿದ ಬಳಿಕವೂ ಕೋವಿಡ್ ಪರೀಕ್ಷೆ ಕಡ್ಡಾಯ ಎಂದು ನಿಯಮ ರೂಪಿಸಲಾಗಿತ್ತು.

ಆದರೆ ಇತ್ತೀಚೆಗೆ ಭಾರತದಿಂದ ಹೋದ ಕೆಲ ಪ್ರಯಾಣಿಕರಿಗೆ ಕೊರೊನ ಪಾಸಿಟಿವ್ ದೃಢವಾಗಿದೆ. ಈ ಹಿನ್ನಲೆಯಲ್ಲಿ ಹಾಂಕಾಂಗ್ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!