Thursday, April 25, 2024
spot_imgspot_img
spot_imgspot_img

ಆಸ್ಟ್ರೇಲಿಯಾದಲ್ಲಿ ಪ್ಲೇಗ್ ಭೀತಿ; ಭಾರತದಿಂದ ಪಾಷಾಣ ಆಮದಿಗೆ ನಿರ್ಧಾರ

- Advertisement -G L Acharya panikkar
- Advertisement -

ಮೆಲ್ಬರ್ನ್: ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ನಲ್ಲಿ ಎಲ್ಲೆಲ್ಲೂ ಇಲಿಗಳ ಹಾವಳಿ ಅಧಿಕವಾಗಿದ್ದು, ಅಲ್ಲಿ ಶತಮಾನಗಳ ಹಿಂದೆ ಬಂದು ಹೋಗಿದ್ದ ಪ್ಲೇಗ್ ರೋಗದ ಭೀತಿ ಆವರಿಸಿದೆ.

ನ್ಯೂಸೌತ್ ವೇಲ್ಸ್‍ನ ಗ್ರಾಮೀಣ ಪ್ರದೇಶಗಳಲ್ಲಿರುವ ರೈತರ ಮನೆಗಳಲ್ಲಿ, ಭತ್ತದ ಕಣಜಗಳಲ್ಲಿ, ಕೊಟ್ಟಿಗೆಗಳಲ್ಲಿ ಇಲಿಗಳು ಎಗ್ಗಿಲ್ಲದೆ ಓಡಾಡುತ್ತಿವೆ. ನೋಡನೋಡುತ್ತಲೇ ಅವುಗಳ ಸಂತತಿ ಹತ್ತಾರು ಪಟ್ಟು ಹೆಚ್ಚಾಗಿದೆ.

ಅವುಗಳ ಕಾಟದಿಂದ ಪಾರಾಗಲು ರೈತರು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಆ ಪ್ರಾಂತ್ಯದ ಆಸ್ಪತ್ರೆಗಳಲ್ಲೂ ಇಲಿಗಳ ಕಾಟ ಜೋರಾಗಿದೆ ಎಂದು ಹೇಳಲಾಗಿದೆ. ರೈತರು ಹಾಗೂ ಆಸ್ಪತ್ರೆಯ ರೋಗಿಗಳು ಇಲಿಗಳ ಕಡಿತಕ್ಕೆ ತುತ್ತಾಗುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇಲಿಗಳ ನಿಯಂತ್ರಣಕ್ಕೆ ಮುಂದಾಗಿರುವ ನ್ಯೂವೇಲ್ಸ್ ಸರ್ಕಾರ, ಈ ಹಿಂದೆ ಅಲ್ಲಿ ನಿಷೇಧಿಸಲ್ಪಟ್ಟಿದ್ದ ಬ್ರೋಮೊಡಿಯೊಲೋನ್ ಎಂಬ ಪಾಷಾಣವನ್ನು ತರಿಸಲು ನಿರ್ಧರಿಸಿದೆ. ಇದಕ್ಕಾಗಿ ಭಾರತಕ್ಕೆ ಮನವಿ ಸಲ್ಲಿಸಿರುವ ಅಲ್ಲಿನ ಸರ್ಕಾರ, ಸುಮಾರು 5000 ಲೀಟರ್‍ಗಳಷ್ಟು ಬ್ರೋಮೊಡಿಯೊಲೋನ್ ಕಳಿಸುವಂತೆ ಕೇಳಿಕೊಂಡಿದೆ.

ಬ್ರೋಮೊಡಿಯೊಲೋನ್ ಗಿಂತ ಉತ್ತಮವಾದ ಬೇರೊಂದು ಇಲಿ ಪಾಷಾಣ ಈ ಭೂಮಿಯಲ್ಲಿ ಸಿಗುವುದಿಲ್ಲ. ಹಾಗಾಗಿ, ಭಾರತದಿಂದ ಅದನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ನ್ಯೂವೇಲ್ಸ್‍ನ ಆರೋಗ್ಯ ಸಚಿವ ಆಯಡಮ್ ಮಾರ್ಷಲ್ ತಿಳಿಸಿದ್ದಾರೆ.

- Advertisement -

Related news

error: Content is protected !!