- Advertisement -
- Advertisement -




ಇತ್ತೀಚಿಗೆ ಉಡುಪಿಯ ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ಕು ಜನರನ್ನು ಹತ್ಯೆ ಮಾಡಿ ರಾಜ್ಯವನ್ನೇ ಬೆಚ್ಚಿಬೀಳಿಸಿದ ಪ್ರಕರಣದ ಆರೋಪಿ ಪ್ರವೀಣ್ ಚೌಗುಳೆಯನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡುವಲ್ಲಿ ಶ್ರಮವಹಿಸಿದ ಉಡುಪಿ, ಮಂಗಳೂರು, ಬೆಳಗಾವಿಯ ಒಟ್ಟು 41 ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ 1,42,500 ರೂಪಾಯಿ ಯನ್ನು ಬಹುಮಾನವಾಗಿ, ಮಾನ್ಯ ಚಂದ್ರಗುಪ್ತ IGP ಯವರ ಶಿಫಾರಸ್ಸಿನಂತೆ DGP ಅಲೋಕ್ ಮೋಹನ್ ಐಪಿಎಸ್ ರವರು ಮಂಜೂರು ಮಾಡಿರುತ್ತಾರೆ.
ಅದರಲ್ಲಿ ಆರೋಪಿಯ ಚಹರೆ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಈ ಹಿಂದೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತಿದ್ದು ಪ್ರಸ್ತುತ ಆಂತರಿಕ ಭದ್ರತೆ ಇಲಾಖೆಯಲ್ಲಿ (ISD) ಕರ್ತವ್ಯದಲ್ಲಿರುವ ಗೋಪಾಲಕೃಷ್ಣ ASI ಇವರಿಗೆ 2500ರೂಪಾಯಿ ನಗದು ಬಹುಮಾನ ಹಾಗೂ ಪ್ರಶಂಸನ ಪತ್ರ ದೊರೆತಿರುತ್ತದೆ. ಇವರು ಈ ಹಿಂದೆ ವಿಟ್ಲ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಜನಸ್ನೇಹಿ ಪೊಲೀಸ್ ಆಗಿದ್ದರು.
- Advertisement -