


ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬಾಳ್ತಿಲದಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ ವಿಟ್ಲ ಸೈಂಟ್ ರೀಟಾ ಶಾಲೆಯ ಹಲವು ವಿದ್ಯಾರ್ಥಿಗಳು ವಿವಿಧ ವಿಭಾಗಗಳ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.
14 ರಿಂದ 17ರ ವಯೋಮಾನದ ಬಾಲಕಿಯರ ಕರಾಟೆ ಪಂದ್ಯಾಟದ -30 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಪ್ರಣಮ್ಯ ಪಿ ಎಸ್ ಪ್ರಥಮ ಸ್ಥಾನ, 14 ರಿಂದ 17ರ ವಯೋಮಾನದ ಬಾಲಕಿಯರ ಕರಾಟೆ ಪಂದ್ಯಾಟದ -34 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಮೌಶ್ಮಿ ಆರ್ ಶೆಟ್ಟಿ ಪ್ರಥಮ ಸ್ಥಾನ, ಮತ್ತು 14 ರಿಂದ 17ರ ವಯೋಮಾನದ ಬಾಲಕರ ಕರಾಟೆ ಪಂದ್ಯಾಟದದಲ್ಲಿ ಸೃಜನ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
14 ರಿಂದ 17ರ ವಯೋಮಾನದ ಬಾಲಕರ ಕರಾಟೆ ಪಂದ್ಯಾಟದ -35 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ವಿನುಶ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಈ ಎಲ್ಲಾ ಕರಾಟೆ ಸ್ಪರ್ಧಾ ವಿಜೇತರು ಕರಾಟೆ ಶೆಕ್ಷಕ ಸೆನ್ಸಾಯಿ ಮಾಧವ ಅಳಿಕೆ ಇವರಿಂದ ಕರಾಟೆ ತರಭೇತಿ ಪಡೆಯುತ್ತಿದ್ದಾರೆ.