ಲಕ್ನೋ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನಡೆಯಲಿರುವ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಎದುರು ನೋಡುತ್ತಿದೆ.
1992ರಲ್ಲಿ ಹಿಂದೂ ಸಂಘಟನೆಯ ಸಾಮಾನ್ಯ ಕಾರ್ಯಕರ್ತನಾಗಿ ರಥಯಾತ್ರೆಯಲ್ಲಿ ಭಾಗವಹಿಸಿದ್ದ ನರೇಂದ್ರ ಮೋದಿ, ಪ್ರಧಾನಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಒಟ್ಟು 175 ಮಂದಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಪೈಕಿ 135 ಮಂದಿ ಸಾಧು ಸಂತರು ಇರುವುದು ವಿಶೇಷ.
ಪ್ರಧಾನಿ ಮೋದಿ ವೇಳಾಪಟ್ಟಿ:
ಇಂದು ಬೆಳಿಗ್ಗೆ 9.30ಕ್ಕೆ ದೆಹಲಿಯಿಂದ ಪ್ರಧಾನಿ ಮೋದಿ ಅಯೋಧ್ಯೆ ಕಡೆ ಪ್ರಯಾಣಿಸಲಿದ್ದಾರೆ. ಬೆಳಿಗ್ಗೆ 10.30ಕ್ಕೆ ಪ್ರಧಾನಿ ಉತ್ತರ ಪ್ರದೇಶದ ಲಕ್ನೋ ತಲುಪಲಿದ್ದಾರೆ. ನಂತರ 11.30ಕ್ಕೆ ಅಯೋಧ್ಯೆ ತಲುಪಲಿರುವ ಪ್ರಧಾನಿ ಮೋದಿ, 11.40ಕ್ಕೆ ಹನುಮಾನ್ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಮಧ್ಯಾಹ್ನ 12.15ಕ್ಕೆಭೂಮಿ ಪೂಜೆ ನೆರವೇರಿಸಲಿದ್ದಾರೆ.
Ayodhya decorated ahead of the foundation stone laying ceremony of #RamMandir today; visuals from Saryu Ghat. pic.twitter.com/S3LPcXVkWF
— ANI UP (@ANINewsUP) August 5, 2020
ಅಯೋಧ್ಯೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಭೂಮಿ ಪೂಜೆ ನಡೆಯುವ ಸ್ಥಳದಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ. ಇನ್ನು ಅಯೋಧ್ಯೆಯ ರಸ್ತೆಗಳೆಲ್ಲವೂ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ.