ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲು ದಿನಾಂಕ ನಿಗದಿ ಮಾಡಲಾಗಿದೆ. ಆಗಸ್ಟ್ 3 ಅಥವಾ 5ರಂದು ಭೂಮಿ ಪೂಜೆ ನಡೆಸಲಾಗುವುದು.ಇವೆರಡು ಶುಭದಿನವಾಗಿದ್ದು, ಇದರಲ್ಲಿ ಯಾವುದಾರೊಂದು ದಿನಾಂಕವನ್ನು ನಿರ್ಧಾರ ಮಾಡಲಾಗುವುದು. ಭೂಮಿ ಪೂಜೆ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಆಹ್ವಾನ ನೀಡಲಾಗಿದೆ.
ಶನಿವಾರ ನಡೆದ ಟ್ರಸ್ಟ್ನ ಮೊದಲ ಸಭೆಯಲ್ಲಿ ಶುಭದಿನಾಂಕದ ಬಗ್ಗೆ ಚರ್ಚೆ ಮಾಡಲಾಯಿತು. ನಕ್ಷತ್ರಗಳು ಹಾಗೂ ಗ್ರಹಗಳ ಚಲನವಲನಗಳ ಆಧಾರದ ಪ್ರಕಾರ ಆಗಸ್ಟ್ 3 ಹಾಗೂ ಆಗಸ್ಟ್ 5 ಶುಭದಿನ. ಈಗಾಗಲೇ ಭೂಮಿಪೂಜೆಗೆ ಪ್ರಧಾನಿ ಮೋದಿಗೆ ಆಹ್ವಾನ ನೀಡಲಾಗಿದೆ ಎಂದು ಅಧ್ಯಕ್ಷ ನೃತ್ಯ ಗೋಪಾಲ್ ದಾಸ್ ಅವರ ವಕ್ತಾರ ಮಹಂತ್ ಕಮಲ್ ನಯನ್ ದಾಸ್ ತಿಳಿಸಿದ್ದಾರೆ.
2019 ರ ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಐತಿಹಾಸಿಕ ತೀರ್ಪು ನೀಡಿತ್ತು. ಇದಕ್ಕೆ ಟ್ರಸ್ಟ್ ಕೂಡ ರಚಿಸಲಾಗಿದೆ. ಇನ್ನು ಮುಸ್ಲಿಮರಿಗೆ ಜಿಲ್ಲೆಯ ಬೇರೆಡೆ ಐದು ಎಕರೆ ಸೂಕ್ತವಾದ ಜಮೀನನ್ನು ನೀಡಲಾಗುವುದು ಎಂದು ತೀರ್ಪು ನೀಡಿತ್ತು.