Sunday, July 19, 2026
spot_imgspot_img
spot_imgspot_img

ಬಿ.ಸಿ ರೋಡ್‌: ಬ್ರೇಕ್ ಫೇಲ್‌ ಆಗಿ ಅಡ್ಡಾದಿಡ್ಡಿ ರಸ್ತೆಯಲ್ಲಿ ಚಲಿಸಿ ಕೆಲವು ವಾಹನಗಳಿಗೆ ಢಿಕ್ಕಿ ಹೊಡೆದ ಬಸ್‌..!

- Advertisement -
- Advertisement -

ಬಿ.ಸಿ ರೋಡ್‌: ಬ್ರೇಕ್ ವೈಫಲ್ಯಗೊಂಡು ಬಸ್‌ ಅಡ್ಡಾದಿಡ್ಡಿ ಚಲಿಸಿದ ಪರಿಣಾಮ ಕೆಲವು ವಾಹನಗಳಿಗೆ ಢಿಕ್ಕಿ ಹೊಡೆದ ಘಟನೆ ಬಂಟ್ವಾಳದ ಬಿಸಿರೋಡಿನಲ್ಲಿ ನಡೆದಿದೆ.

ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಮಂಗಳೂರಿನಿಂದ ಪುತ್ತೂರು ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಸು ಬಿಸಿರೋಡಿನ ಪ್ರೈ ಓವರ್ ಕೆಲಗಡೆ ತಲುಪಿದಾಗ ಬ್ರೇಕ್ ವೈಫಲ್ಯಗೊಂಡಿದೆ. ಇದರಿಂದ ಬಸ್ಸು ಅಡ್ಡಾದಿಡ್ಡಿ ಸಂಚರಿಸಿ, ಬಹು ಬೆಲೆ ಬಾಳುವ ವಾಹನಕ್ಕೆ ಢಿಕ್ಕಿಯಾಗಿ ಬಳಿಕ ನಿಂತಿದೆ. ಅದೃಷ್ಟವಶಾತ್ ಸ್ಕೂಟರ್ ಸವಾರ ವಾಹನದಿಂದ ಹಾರಿದ ಕಾರಣ ಆತನ ಜೀವ ಉಳಿದುಕೊಂಡಿದೆ. ಘಟನೆಯಿಂದ ಕೆಲ ಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

- Advertisement -

Related news

error: Content is protected !!