Sunday, June 21, 2026
spot_imgspot_img
spot_imgspot_img

ನಾಲ್ಕು ತಿಂಗಳ ಹೆಣ್ಣು ಮಗು ಪತ್ತೆ ; ಮಹಿಳೆಯಿಂದ ಮಗು ರಕ್ಷಣೆ

- Advertisement -
- Advertisement -

ಉಜಿರೆ: ಬೆಳಾಲುವಿನ ಕೊಡೋಳುಕೆರೆಯಲ್ಲಿ ನಾಲ್ಕು ತಿಂಗಳ ಹೆಣ್ಣು ಮಗುವೊಂದು ಕಾಡಿನ ಮಧ್ಯೆ ಬಿಟ್ಟು ಹೋದ ಘಟನೆ ಇಂದು(ಮಾ.22) ಬೆಳಗ್ಗೆ ನಡೆದಿದೆ.

ಬೆಳಾಲು ಗ್ರಾ.ಪಂ ವ್ಯಾಪ್ತಿಯ ಮುಂಡ್ಕೊಟ್ಟು ರಸ್ತೆಯ ಕೊಡೋಳುಕೆರೆ ಕಾಡಿನಲ್ಲಿ ಮಗುವೊಂದು ಅಳುವ ಶಬ್ದ ದಾರಿಹೋಕ ಮಹಿಳೆಗೆ ಕೇಳಿದ್ದು, ತಕ್ಷಣ ಅವರು ಮಗುವನ್ನು ಕಂಡು ಸಂಬಂಧ ಪಟ್ಟವರಿಗೆ ತಿಳಿಸಿದ್ದಾರೆ. ಹಸುಕೂಸು ಆರೋಗ್ಯಕರವಾಗಿದೆ ಎಂದು ತಿಳಿದುಬಂದಿದೆ.ಘಟನಾ ಸ್ಥಳಕ್ಕೆ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಧಾವಿಸಿದ್ದು, ಮಹಿಳಾ ಮತ್ತು ಮಕ್ಕಳ ಇಲಾಖಾ ಬರುವಿಕೆಗಾಗಿ ಕಾಯುತ್ತಿದ್ದಾರೆ ಎಂದು ಬೆಳಾಲು ಗ್ರಾ.ಪಂ. ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್‌ ಗೌಡ ತಿಳಿಸಿದ್ದಾರೆ.

- Advertisement -

Related news

error: Content is protected !!