Sunday, June 29, 2025
spot_imgspot_img
spot_imgspot_img

ಅಲೆಕ್ಸಾದಲ್ಲಿ ಬಿಗ್ ಬಿ ಕಲರವ

- Advertisement -
- Advertisement -

ನವದೆಹಲಿ: ಈಗ ಸಾಕಷ್ಟು ಟ್ರೆಂಡಿಯಾಗಿರುವ ಅಮೆಜಾನ್ ಅಲೆಕ್ಸಾದಲ್ಲಿ ಅಮಿತಾಬ್ ಬಚ್ಚನ್ ಅವರ ಧ್ವನಿ ಕೇಳಿಬರಲಿದೆ.


ಈ ಮೂಲಕ ಅಮಿತಾಬ್ ಬಚ್ಚನ್ ಭಾರತದಲ್ಲಿ ಅಲೆಕ್ಸಾದ ಮೊದಲ ಸೆಲೆಬ್ರೆಟಿಯಾಗಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಈ ಹೊಸ ವೈಶಿಷ್ಟ್ಯ ಲಭ್ಯವಾಗಲಿದೆ. ಆದರೆ ಬಚ್ಚನ್ ಅವರ ಧ್ವನಿ ಉಚಿತವಾಗಿ ಲಭ್ಯವಿರುವುದಿಲ್ಲ ಎಂದು ಅಮೆರಿಕದ ಇ-ಕಾಮರ್ಸ್ ದೈತ್ಯ ಅಮೆಜಾನ್ ತನ್ನ ಬ್ಲಾಗ್ ನಲ್ಲಿ ಸೋಮವಾರ ತಿಳಿಸಿದೆ.


ಡಿಜಿಟಲ್ ಅಸಿಸ್ಟೆಂಟ್ ಅಲೆಕ್ಸಾಗಾಗಿ ಸೆಲೆಬ್ರೆಟಿಗಳ ಧ್ವನಿ ಹೊಂದುವ ನಿಟ್ಟಿನಲ್ಲಿ ಭಾರತದಲ್ಲಿ ನಟ ಅಮಿತಾಬ್ ಬಚ್ಚನ್ ಅವರೊಂದಿಗೆ ಪಾಲುದಾರಿಕೆ ಹೊಂದಿದೆ ಎಂದು ಅಮೆಜಾನ್ ಪ್ರಕಟಿಸಿದೆ.


ಬಚ್ಚನ್ ಭಾರತದಿಂದ ಅಲೆಕ್ಸಾಗಾಗಿ ಧ್ವನಿ ನೀಡಿದ ಮೊದಲಿಗರಾಗಿದ್ದು, ಆದರೆ ಜಾಗತಿಕವಾಗಿ ಮೊದಲಿಗರಲ್ಲ. ಕಂಪನಿಯು ಈ ಮೊದಲು ಅಮೆರಿಕ(ಯುಎಸ್) ದಲ್ಲಿ ಒಬ್ಬ ಪ್ರಸಿದ್ಧ ವ್ಯಕ್ತಿಯೊಂದಿಗೆ ಕೆಲಸ ಮಾಡಿದ್ದು, ನಟ ಸ್ಯಾಮ್ಯುಯೆಲ್ ಎಲ್. ಜಾಕ್ಸನ್ ಅವರ ಧ್ವನಿಯನ್ನು ಮೊದಲು ಪರಿಚಯಿಸಲಾಗಿತ್ತು.

- Advertisement -

Related news

error: Content is protected !!