Sunday, June 7, 2026
spot_imgspot_img
spot_imgspot_img

ಕಾಣಿಯೂರು: ಬೈತ್ತಡ್ಕ ಹೊಳೆಗೆ ಕಾರು ಬಿದ್ದ ಪ್ರಕರಣ; ಇಬ್ಬರ ಮೃತದೇಹ ಪತ್ತೆ

- Advertisement -
- Advertisement -

ಕಾಣಿಯೂರು: ಬೈತ್ತಡ್ಕ ಹೊಳೆಗೆ ಕಾರು ಬಿದ್ದ ಪ್ರಕರಣಕ್ಕೆ ಸಂಬಂಧಿಸಿ ಬೈತ್ತಡ್ಕದಿಂದ 200 ಮೀಟರ್ ದೂರ ಮರಕ್ಕಡ ಹೊಳೆಯಲ್ಲಿ ಇಬ್ಬರ ಮೃತ ದೇಹ ಪತ್ತೆಯಾಗಿದೆ.

ಒಬ್ಬನ ಮೃತ ದೇಹವು ಹೊಳೆಯ ಬದಿಯಲ್ಲಿದ್ದ ಮರದ ದಿಮ್ಮಿಯಲ್ಲಿ ಪತ್ತೆಯಾಗಿದೆ. ಹೊಳೆಯಲ್ಲಿ ನೀರು ಕಡಿಮೆಯಾದ ಹಿನ್ನಲೆಯಲ್ಲಿ ಮೃತ ದೇಹ ಬೆಳಕಿಗೆ ಬಂದಿದೆ. ಇನ್ನೊಂದು ಮೃತದೇಹವೂ ಪತ್ತೆಯಾಗಿದೆ. ಮೊದಲ ಶವ ಪತ್ತೆಯಾದ 50 ಮೀಟರ್ ದೂರದಲ್ಲಿ ಇನ್ನೊಂದು ಶವ ಪತ್ತೆಯಾಗಿದೆ.

ಘಟನಾ ಸ್ಥಳಕ್ಕೆ ತಹಶೀಲ್ದಾರ್‌ ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಪೊಲೀಸರು, ರಕ್ಷಣಾ ಸಿಬ್ಬಂದಿಗಳು, ಜನಪ್ರತಿನಿಧಿಗಳು, ಸ್ಥಳೀಯರು ಇದ್ದು ಕಾರ್ಯಚರಣೆ ನಡೆಸಿದ್ದಾರೆ.

ರಾಜ್ಯಾದ್ಯಂತ ಸುದ್ದಿಯಾಗಿದ್ದ ಈ ಘಟನೆ ಸಾಕಷ್ಟು ತಿರುವನ್ನು ಪಡೆದುಕೊಂಡಿತ್ತು. ಯುವಕರು ನಾಪತ್ತೆಯಾದ ಪ್ರಕರಣ ವಿಟ್ಲ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.

ಕಡಬ: ಸೇತುವೆಯಿಂದ ನದಿಗೆ ಕಾರು ಬಿದ್ದ ಪ್ರಕರಣ; ವಿಟ್ಲದ ಮೂಲದ ಯುವಕ ನಾಪತ್ತ

- Advertisement -

Related news

error: Content is protected !!