Saturday, June 28, 2025
spot_imgspot_img
spot_imgspot_img

ಬಜ್ಪೆ: ʼತಲ್ವಾರ್ ಹಿಡಿದು ಬೈಕ್ ಸವಾರರ ಸಂಚಾರʼ : ಸುಳ್ಳು ವಾಯ್ಸ್ ಕ್ಲಿಪ್ ವೈರಲ್‌ – ಪ್ರಕರಣ ದಾಖಲು

- Advertisement -
- Advertisement -

ಬಜ್ಪೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ “ತಲ್ವಾರ್ ಹಿಡಿದ ಬೈಕ್ ಸವಾರರ ಫೋಟೊ ಮತ್ತು ವಾಯ್ಸ್ ಕ್ಲಿಪ್” ಬಗ್ಗೆ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸೂರಲ್ಪಾಡಿ ನಿವಾಸಿ ಮುಹಮ್ಮದ್ ಸುಹೈಲ್ ಎಂಬವರು ಈ ಕುರಿತು ದೂರು ನೀಡಿದ್ದಾರೆ.

‘ನಾನು ಬೈಕ್ ನಲ್ಲಿ ಸ್ನೇಹಿತನೊಂದಿಗೆ ಮೂಡುಬಿದಿರೆಗೆ ಹೋಗುತ್ತಿದ್ದ ಸಂದರ್ಭ ಆಕ್ಟೇರಿಯಂ ಕಲ್ಲು ಮತ್ತು ಇ-ಸಿಗರೇಟ್ ಹಿಡಿದುಕೊಂಡಿದ್ದನ್ನು ಯಾರೋ ದುಷ್ಕರ್ಮಿಗಳು ಫೋಟೊ ತೆಗೆದು ‘ತಲ್ವಾರ್ ಹಿಡಿದ ಬೈಕ್ ಸವಾರರು’ ಎಂದು ಫೋಟೊ ಮತ್ತು ವಾಯ್ಸ್ ಕ್ಲಿಪ್‌ನ್ನು ‘ಕರಾವಳಿ ಟೈಗರ್ಸ್’ ಎಂಬ ಇನ್ಸಾಗ್ರಾಂ ಪೇಜ್ ನಲ್ಲಿ ಸುಳ್ಳುಸುದ್ದಿ ಹರಡಿದ್ದಾರೆ. ಬೈಕ್‌ನಲ್ಲಿ ಶಸ್ತ್ರಾಸ್ತ್ರ ಹಿಡಿದುಕೊಂಡು ಸಂಚರಿಸುತ್ತಿರುವುದಾಗಿ ನನ್ನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿ ಕೋಮು ಪ್ರಚೋದನೆ ನೀಡಿರುವ “ಕರಾವಳಿ ಟೈಗರ್ಸ್” ಇನ್ಸಾಗ್ರಾಂ ಖಾತೆಯ ಮೇಲೆ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

- Advertisement -

Related news

error: Content is protected !!