Wednesday, May 15, 2024
spot_imgspot_img
spot_imgspot_img

ಬಾಳ್ತಿಲ ಗ್ರಾ.ಪಂ.ಸಭಾಭವನದಲ್ಲಿ ಉಚಿತ ವೈದ್ಯಕೀಯ ನೇತ್ರ ಚಿಕಿತ್ಸಾ ಮತ್ತು ರಕ್ತದಾನ ಶಿಬಿರ

- Advertisement -G L Acharya panikkar
- Advertisement -

ಬಾಳ್ತಿಲ: ಪ್ರಾಥಮಿಕ ಆರೋಗ್ಯ ಕೇಂದ್ರ ಕಲ್ಲಡ್ಕ ಬಾಳ್ತಿಲ, ಯೇನಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ, ಲೇಡಿಗೋಶನ್ ಆಸ್ಪತ್ರೆ ಮಂಗಳೂರು ದ.ಕ ಇವರ ಸಹಭಾಗಿತ್ವದಲ್ಲಿ ಗ್ರಾಮ ಪಂಚಾಯತ್ ಬಾಳ್ತಿಲ, ಸೀನಿಯರ್‍ ಛೇಂಬರ್ ಇಂಟರ್‌ನ್ಯಾಶನಲ್ ಬಂಟ್ವಾಳ ನೇತ್ರಾವತಿ ಸಂಗಮ, ಜೋಡುಮಾರ್ಗ ಲಯನ್ಸ್ ಕ್ಲಬ್ ಮಾಣಿ, ರೋಟರಿ ಕ್ಲಬ್ ಮೊಡಂಕಾಪು, ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಬಾಳ್ತಿಲ ಇವರ ಜಂಟಿ ಆಶ್ರಯದಲ್ಲಿ ಉಚಿತ ವೈದ್ಯಕೀಯ ನೇತ್ರ ಚಿಕಿತ್ಸಾ ಮತ್ತು ರಕ್ತದಾನ ಶಿಬಿರವು ಜ.30ರಂದು ಬಾಳ್ತಿಲ ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು.

ಶಿಬಿರವನ್ನು ಬಾಳ್ತಿಲ ಕಲ್ಲಡ್ಕ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಡಾ| ರೋಶನಿ ಪೂಂಜ ಉದ್ಘಾಟಿಸಿದರು. ಮಾಜಿ ಶಾಸಕ ಏ. ರುಕ್ಮಯ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಅಭ್ಯಾಗತರಾಗಿ ಭಾಗವಹಿಸಿದ್ದರು. SCI ಬಂಟ್ವಾಳ ನೇತ್ರಾವತಿ ಸಂಗಮದ ಸ್ಥಾಪಕ ಅಧ್ಯಕ್ಷ Snr ಜಯಾನಂದ ಪೆರಾಜೆ, ದೂರವಾಣಿ ಸಂಪರ್ಕ ಇಲಾಖೆಯ ನಿವೃತ್ತ ಜನರಲ್ ಮ್ಯಾನೇಜರ್ ಕೆ.ಎಂ ಶೆಟ್ಟಿ, ಶ್ರೀ ಲಕ್ಷ್ಮೀ ಗಣೇಶ ಕೆ.ಟಿ ಹೋಟೆಲ್ ಕಲ್ಲಡ್ಕ ಇದರ ಮಾಲಕ ರಾಜೇಂದ್ರ ಹೊಳ್ಳ, ಜಿ.ಪಂ.ಮಾಜಿ ಸದಸ್ಯ ಚೆನ್ನಪ್ಪ ಕೋಟ್ಯಾನ್, ಬಂಟ್ವಾಳ ತಾ.ಪಂ. ಮಾಜಿ ಉಪಾಧ್ಯಕ್ಷ ದಿನೇಶ ಅಮ್ಟೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಬಾಳ್ತಿಲ ಇದರ ವತಿಯಿಂದ ಅಶಕ್ತರಿಗೆ ಧನಸಹಾಯ, ಡಾ.ರೋಶನಿ ಪೂಂಜಾ ಅವರಿಗೆ ಗೌರವ ಅಭಿನಂದನೆ, ಬಾಳ್ತಿಲ ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ನಡೆಯಿತು.

- Advertisement -

Related news

error: Content is protected !!