- Advertisement -
- Advertisement -
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಸಾವಿರಾರು ಮರಗಳು ಸುಟ್ಟು ಕರಕಲಾಗಿವೆ.

ಬೇಸಿಗೆ ಕಾಲದಲ್ಲಿ ಇಂಥ ಬೆಂಕಿ ಅವಘಡಗಳು ಹೆಚ್ಚಾಗಿ ಸಂಭವಿಸುತ್ತವೆ. ಕಳೆದ ವರ್ಷವೂ ಇದೇ ರೀತಿ ಬೆಂಕಿ ಕಾಣಿಸಿಕೊಂಡ ಪರಿಣಾಮ ನೂರಾರು ಎಕರೆ ಅರಣ್ಯ ನಾಶವಾಗಿತ್ತು. ತಡರಾತ್ರಿಯೂ ಕರಡೀಕಲ್ಲು ಗುಡ್ಡದ ಮೂರು ದಿಕ್ಕಿನಲ್ಲಿ ಒಟ್ಟೊಟ್ಟಿಗೆ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮರಗಿಡಗಳು ಸುಟ್ಟು ಕರಕಲಾಗಿವೆ, ಸಾಕಷ್ಟು ಪ್ರಾಣಿ ಪಕ್ಷಿಗಳು ಕೂಡ ಸಾವನ್ನಪ್ಪಿರುವ ಸಾಧ್ಯತೆ ಇದೆ. ವಿಷಯ ತಿಳಿದು ರಾತ್ರಿಯೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ರಾತ್ರಿಯೆಲ್ಲಾ ಪಾಡುಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.


- Advertisement -