- Advertisement -
- Advertisement -


ಬೆಂಗಳೂರಿನ ಪಾರ್ಟಿಗಳಿಗೆ ಪೂರೈಕೆ ಮಾಡಲು ತರಿಸಿದ್ದ ಬರೋಬ್ಬರಿ ಹದಿನಾರು ಕೆಜಿ ಗಾಂಜಾ ಸೊಪ್ಪು ಮತ್ತು ಥೈಲ್ಯಾಂಡ್ನಿಂದ ತರಿಸಿದ್ದ ಸುಮಾರು ಮೂರು ಕೆಜಿ ಹೈಡ್ರೋ ಗಾಂಜಾ ಪೊಲೀಸ್ ವಶ ಪಡಿಸಿಕೊಂಡ ಘಟನೆ ನಡೆದಿದೆ.
ದಾವಣಗೆರೆ ಮೂಲದ ರಕ್ಷಿತ್ ರಮೇಶ್ ಎಂಬಾತನನ್ನು ವಶಕ್ಕೆ ಪಡೆದ ಸಿಸಿಬಿ ಅಧಿಕಾರಿಗಳು, ಆತನ ಸಂಪಿಗೆಹಳ್ಳಿಯ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಎಂಡಿಎಂಎ, ಎಲ್ಎಸ್ಡಿ ಮತ್ತು ಚರಸ್ ಎಲ್ಲ ಸೇರಿ ಸುಮಾರು 2.5 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ವಶಕ್ಕೆ ಪಡೆದಿದ್ದಾರೆ.
- Advertisement -