Friday, May 3, 2024
spot_imgspot_img
spot_imgspot_img

ವಿಕಲ ಚೇತನ ಮಕ್ಕಳನ್ನು ದತ್ತು ಪಡೆದ ನಟಿ ಶ್ರೀಲೀಲಾ; ನಟಿಯ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ..!

- Advertisement -G L Acharya panikkar
- Advertisement -
vtv vitla
vtv vitla

ಕನ್ನಡದ ಖ್ಯಾತ ನಟಿ ಶ್ರೀಲೀಲಾ ಅವರು ‘ಕಿಸ್​’, ‘ಭರಾಟೆ’ ಮುಂತಾದ ಸಿನಿಮಾಗಳ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ತೆಲುಗಿನ ‘ಪೆಳ್ಳಿ ಸಂದಡಿ’ ಚಿತ್ರದಲ್ಲಿ ನಟಿಸಿದ ಬಳಿಕ ಅವರ ಖ್ಯಾತಿ ದುಪ್ಪಟ್ಟಾಗಿದೆ. ಅಲ್ಲಿನ ಸ್ಟಾರ್​ ನಟರ ಚಿತ್ರಗಳಿಗೆ ಅವರು ನಾಯಕಿಯಾಗಿ ಆಯ್ಕೆ ಆಗುತ್ತಿದ್ದಾರೆ. 

sreeleela: In Pictures: Sreeleela is a ray of sunshine in her elegant  yellow outfit | Kannada Movie News - Times of India

ಶ್ರೀಲೀಲಾ ಅಭಿನಯಿಸಿರುವ ಕನ್ನಡದ ‘ಬೈ ಟೂ ಲವ್​’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಹಲವು ಕಾರಣಗಳಿಗಾಗಿ ಸುದ್ದಿ ಆಗುತ್ತಿರುವ ಶ್ರೀಲೀಲಾ ಅವರು ಈಗೊಂದು ಮಹತ್ವದ ಕಾರ್ಯ ಮಾಡಿದ್ದಾರೆ. ಇಬ್ಬರು ವಿಶೇಷ ಚೇತನ ಮಕ್ಕಳನ್ನು ಅವರು ದತ್ತು ಪಡೆದುಕೊಂಡಿದ್ದಾರೆ. ಆ ಮೂಲಕ ಅವರು ಇತರರಿಗೂ ಮಾದರಿ ಆಗಿದ್ದಾರೆ.

vtv vitla
vtv vitla

ಶ್ರೀಲೀಲಾ ಈಗಿನ್ನೂ ಚಿತ್ರರಂಗದಲ್ಲಿ ಮಿಂಚಲು ಆರಂಭಿಸಿದ್ದಾರೆ. ಇಂಥ ಸಂದರ್ಭದಲ್ಲಿ ಶ್ರೀಲೀಲಾ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಸಮಾಜಮುಖಿ ಆಲೋಚನೆಯ ಮೂಲಕ ಗಮನ ಸೆಳೆಯುತ್ತಿದ್ದಾರೆ. ನಟಿಯ ಈ ಕಾರ್ಯಕ್ಕೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Sreeleela: The bridal beauty who is receiving a series of offers in  Tollywood .. because her remuneration has also increased .. | Pelli Sandadi  Heroine Sree Leela Demands Huge Remuneration - filmyzoo - Hindisip

ಮಾತೃಶ್ರೀ ಮನೋವಿಕಾಸ ಕೇಂದ್ರಕ್ಕೆ ಶ್ರೀಲೀಲಾ ಮತ್ತು ‘ಬೈ ಟೂ ಲವ್​’ ಚಿತ್ರತಂಡದವರು ಭೇಟಿ ನೀಡಿದ್ದಾರೆ. ಇದು ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಾಲೆ. ಇಲ್ಲಿರುವ ಗುರು ಮತ್ತು ಶೋಭಿತಾ ಎಂಬ ಇಬ್ಬರು ಮಕ್ಕಳನ್ನು ಶ್ರೀಲೀಲಾ ಅವರು ದತ್ತು ಪಡೆದುಕೊಂಡಿದ್ದಾರೆ. ಆ ಮೂಲಕ ಆ ಮಕ್ಕಳಿಗೆ ತಾಯಿಯ ಸ್ಥಾನವನ್ನು ತುಂಬಿದ್ದಾರೆ. ಮಕ್ಕಳ ಭವಿಷ್ಯದ ಸಂಪೂರ್ಣ ಜವಾಬ್ದಾರಿಯನ್ನು ಅವರು ಹೊತ್ತುಕೊಂಡಿದ್ದಾರೆ.

ಬೈ ಟು ಲವ್​’ ಸಿನಿಮಾ ಫೆ.18ರಂದು ತೆರೆ ಕಾಣಲಿದೆ. ಈ ಚಿತ್ರದಲ್ಲಿ ಧನ್ವೀರ್​ ಮತ್ತು ಶ್ರೀಲೀಲಾ ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ತಾಯಿ-ಮಗುವಿನ ಬಾಂಧವ್ಯದ ಕಥೆ ಇದೆ. ಸಿನಿಮಾದಲ್ಲಿ ಮಾತ್ರವಲ್ಲದೇ ರಿಯಲ್​ ಲೈಫ್​ನಲ್ಲಿಯೂ ಶ್ರೀಲೀಲಾ ಅವರು ಮಕ್ಕಳಿಗೆ ಆ ಪ್ರೀತಿ ನೀಡಲು ಮುಂದಾಗಿದ್ದಾರೆ.

- Advertisement -

Related news

error: Content is protected !!