Tuesday, January 26, 2021

ಏಳು ಶಾಸಕರ ಪಟ್ಟಿ ಬಿಡುಗಡೆ – ಸುಳ್ಯ ಶಾಸಕ ಅಂಗಾರ ರಿಗೆ ಒಲಿದ ಸಚಿವ ಸ್ಥಾನ !

ಬೆಂಗಳೂರು: ಬಹು ನಿರೀಕ್ಷಿತ ನೂತನ ಸಚಿವರ ಅಧಿಕೃತ ಪಟ್ಟಿ ಬಿಡುಗಡೆಯಾಗಿದ್ದು , 7 ಮಂದಿ ಶಾಸಕರು ಸಚಿವರಾಗಿ ಸಂಜೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ 7 ಶಾಸಕರು ಇಂದು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಂತಿಮ ಪಟ್ಟಿಯನ್ನ ರಾಜ್ಯಭವನಕ್ಕೆ ಕಳಿಸಲಾಗಿದೆ ಎಂದು ತಿಳಿಸಿದ್ದಾರೆ. “ಅಂತಹ ಸಚಿವರೆಂದರೇ ಆರ್.ಶಂಕರ್, ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ, ಎಸ್ ಅಂಗಾರ, ಸಿಪಿ ಯೋಗೇಶ್ವರ್ ಹಾಗೂ ಉಮೇಶ್ ಕತ್ತಿ” ಆಗಿದ್ದಾರೆ.

ಇಂದು 3.50ಕ್ಕೆ ರಾಜಭವನದಲ್ಲಿ ನಡೆಯಲಿರುವಂತ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದಾಗಿ ಘೋಷಿಸಿದ್ದಾರೆ. ಸಂಪುಟದಲ್ಲಿ ಖಾಲಿಯಿರುವ 7 ಸ್ಥಾನಗಳ ಭರ್ತಿಗೆ 6 ಜನರ ಹೆಸರುಗಳನ್ನ ಸಿಎಂ ನಿನ್ನೆಯೇ ಅಂತಿಮಗೊಳಿಸಿದರು.

7ನೇ ಸ್ಥಾನಕ್ಕೆ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಹಾಗೂ ಶಾಸಕ ಮುನಿರತ್ನ ನಡುವೆ ಟಫ್ ಫೈಟ್ ಏರ್ಪಟ್ಟಿತ್ತು. ಇಬ್ಬರಲ್ಲಿ ಒಬ್ಬರನ್ನ ಮಾತ್ರ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕಿದ್ದ ಹಿನ್ನೆಲೆ ಸಿ.ಪಿ ಯೋಗೇಶ್ವರ್ ಅವರ ಹೆಸರು ಅಂತಿಮ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು ಅವರಿಗೆ ಸಚಿವ ಸ್ಥಾನ ಫಿಕ್ಸ್ ಆಗಿದೆ. ಇದರಿಂದ ಮುನಿರತ್ನಗೆ ನಿರಾಸೆ ಉಂಟಾಗಿದೆ.

- Advertisement -

MOST POPULAR

HOT NEWS

Related news

error: Content is protected !!