- Advertisement -
- Advertisement -
ಬೆಂಗಳೂರು: ಕೊರೋನಾ ಸೋಂಕು ಕಡಿಮೆಯಾಗಬೇಕಾದರೆ ಲಾಕ್ ಡೌನ್ ಅನಿವಾರ್ಯ. ಲಾಕ್ ಡೌನ್ ಮಾಡದಿದ್ರೆ ಸಾವು ನೋವು ಜಾಸ್ತಿಯಾಗುತ್ತದೆ ಎಂದು ಶುಕ್ರವಾರ ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿದ್ದಾರೆ.

ಲಾಕ್ ಡೌನ್ ಬೇಕೆಂದು ಆರೋಗ್ಯ ಇಲಾಖೆ ಬಲವಾಗಿ ಹೇಳುತ್ತದೆ. ತಜ್ಞರು ಕೂಡ ಲಾಕ್ ಡೌನ್ ಮಾಡುವಂತೆ ಹೇಳಿದ್ದಾರೆ ಎಂದು ಸುಧಾಕರ್ ತಿಳಿಸಿದ್ದಾರೆ.

ಲಾಕ್ ಡೌನ್ ವಿಚಾರವಾಗಿ ಸಿಎಂ ಯಡಿಯೂರಪ್ಪ ಜೊತೆಯಲ್ಲೂ ಮಾತುಕತೆ ನಡೆಸಲಾಗುತ್ತದೆ. ಅಂತಿಮವಾಗಿ ಸಿಎಂ ನಿರ್ಧಾರ ಮಾಡುತ್ತಾರೆ. ಜನರ ಸಾವು ನೋವನ್ನು ತಡೆಗಟ್ಟ ಬೇಕು ಅಂದ್ರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.



- Advertisement -