
ಬೆಂಗಳೂರು: ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಸಿಸಿಬಿ ಅಧಿಕಾರಿಗಳು ಡ್ರಗ್ಸ್ ಕೇಸ್ನಲ್ಲಿ ಅತೀದೊಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ಇದುವರೆಗೆ ಡ್ರಗ್ಸ್ ಪೆಡ್ಲರ್ಗಳನ್ನ ಮತ್ತು ಡೀಲರ್ಗಳನ್ನ ಮಾತ್ರ ಬಂಧಿಸುತ್ತಿದ್ದ ಪೊಲೀಸ್ ಅಧಿಕಾರಿಗಳು, ಇದೀಗ ಇದೇ ಮೊದಲ ಬಾರಿಗೆ ಸಿಂಥೆಟಿಕ್ ಡ್ರಗ್ಸ್ ಫ್ಯಾಕ್ಟರಿಯನ್ನ ಪತ್ತೆ ಮಾಡಿದ್ದಾರೆ. ಜೊತೆಗೆ ನೈಜೇರಿಯನ್ ಪ್ರಜೆ ಜಾನ್ ಎಂಬಾತನನ್ನ ಬಂಧಿಸಿದ್ದಾರೆ.

ಶೂ ಮೂಲಕವೇ ಸಪ್ಲೈ
ಸಿಸಿಬಿ ಪೊಲೀಸರ ಕಾರ್ಯಾಚರಣೆಗೆ ಪ್ರಶಂಸೆ ವ್ಯಕ್ತಪಡಿಸಿದ ಕಮಿಷನರ್ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ತಾನು ತಯಾರಿಸಿದ್ದ ಡ್ರಗ್ಸ್ಗಳನ್ನ ಮಾರಾಟ ಮಾಡಲು ಜಾನ್ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದ. ನೈಕಿ ಶೂ ಮೂಲಕವೇ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಇದು ನೋಡಲು ಸ್ಪೋರ್ಟ್ಸ್ ಶೂ ಥರಾ ಕಂಡರೂ ಒಳಗೆ ಮಾದಕ ವಸ್ತು ಇರುತ್ತಿತ್ತು. ಇದೇ ಶೂ ಮೂಲಕ ಹೊರ ರಾಜ್ಯ ಹಾಗೂ ಹೊರ ದೇಶಗಳಿಗೂ ಪೂರೈಕೆ ಮಾಡುತ್ತಿದ್ದ ಅಂತಾ ಮಾಹಿತಿ ನೀಡಿದರು.

ಸಿಸಿಬಿ ಪೊಲೀಸರು ಗೌಪ್ಯ ಕಾರ್ಯಾಚರಣೆ
ಸಿಸಿಬಿ ಪೊಲೀಸರಿಂದ ಒಳ್ಳೆಯ ಕಾರ್ಯಾಚರಣೆ ಆಗಿದೆ. ಹಿಂದೆ ಡ್ರಗ್ ಕೇಸ್ ಒಂದರಲ್ಲಿ ವಿದೇಶಿ ಪ್ರಜೆಯೊಬ್ಬನನ್ನ ಅರೆಸ್ಟ್ ಮಾಡಲಾಗಿತ್ತು. ಆತ ಮತ್ತೊಬ್ಬ ಪೆಡ್ಲರ್ ಜೊತೆ ಸತತ ಸಂಪರ್ಕದಲ್ಲಿದ್ದ. ಆತ ಬೆಂಗಳೂರಿನಲ್ಲಿ ಎಂಡಿಎಂಎ ಮಾತ್ರೆಗಳನ್ನ ಸಪ್ಲೈ ಮಾಡ್ತಿದ್ದ ಎಂದು ಗೊತ್ತಾಗಿದೆ. ಆತ ಬೇರೆ ರಾಷ್ಟ್ರದಿಂದ ಬಂದು ಬೆಟ್ಟದಾಸಪುರದಲ್ಲಿ ಮನೆ ಮಾಡಿ ಅಲ್ಲಿ ಡ್ರಗ್ ತಯಾರಿಸ್ತಿದ್ದ ವಿಡಿಯೋ ಕಳಿಸ್ತಾನೆ. ಈ ಬಗ್ಗೆ ಗಮನ ಹರಿಸಿದ್ದ ಸಿಸಿಬಿ ಪೊಲೀಸರು ಗೌಪ್ಯ ಕಾರ್ಯಾಚರಣೆ ನಡೆಸಿದ್ರು.

ಫೆಬ್ರವರಿಯಲ್ಲಿ ಬೆಂಗಳೂರಿಗೆ ಬಂದಿದ್ದ ಆರೋಪಿ
2018ರಲ್ಲಿ ಭಾರತಕ್ಕೆ ಬಂದಿದ್ದ ನೈಜೀರಿಯಾ ಪ್ರಜೆ ಫೆಬ್ರುವರಿಯಲ್ಲಿ ಬೆಂಗಳೂರಿಗೆ ಬಂದಿದ್ದ. ಬೆಟ್ಟದಾಸಪುರದಲ್ಲಿ ಮನೆ ಮಾಡಿಕೊಂಡಿದ್ದ. ಆ ಮನೆಯಲ್ಲಿ ಲ್ಯಾಬ್ ಸೆಟಪ್ ಮಾಡಿಕೊಂಡು ಉಪಕರಣಗಳನ್ನ ಬಳಸುತ್ತಿದ್ದಾರೆ. ಬೆಂಗಳೂರಿನಲ್ಲಿಯೇ ಕೆಮಿಕಲ್ಗಳನ್ನ ಖರೀದಿಸಿ ಎಂಡಿಎಂಎ ತಯಾರಿಸ್ತಿದ್ದ. ಸಾಮಾನ್ಯ ಎಂಡಿಎಂಎ ಮಾತ್ರೆಗಳಿಗಿಂತಲೂ ಈತ ಬೇರೆ ರೀತಿ ಎಂಡಿಎಂಎ ಡ್ರಗ್ ತಯಾರು ಮಾಡ್ತಿದ್ದ.

75 ಸಾವಿರ ಬಹುಮಾನ
ಹೊರ ದೇಶಗಳಿಗೂ ಈತ ಡ್ರಗ್ ಸಪ್ಲೈ ಮಾಡಿದ್ದಾನೆ. ನ್ಯೂಜಿಲೆಂಡ್ ಸೇರಿದಂತೆ ಹಲವು ದೇಶಗಳಿಗೆ ಸಪ್ಲೈ ಮಾಡಿದ್ದಾನೆ. ಸಾಕಷ್ಟು ಕೇಸ್ ಗಳಲ್ಲಿ ಗಾಂಜಾ ಸೀಜ್ ಮಾಡಿದ್ದೀವಿ. ಈಗ ಸಿಂಥೆಟಿಕ್ ಡ್ರಗ್ ಬಗ್ಗೆ ಕಾರ್ಯಾಚರಣೆ ಮುಂದುವರೆಸಿದ್ದೇವೆ. ಎರಡು ಕೋಟಿ ಮೌಲ್ಯದ ಡ್ರಗ್ ವಶಪಡಿಸಿಕೊಳ್ಳಲಾಗಿದೆ. ಈ ಮೂಲಕ ಯುವ ಸಮೂಹ ಕಾಪಾಡಲಿದ್ದೇವೆ. ಈ ಲ್ಯಾಬ್ನಲ್ಲಿ ಆತ ಒಳ್ಳೆಯ ಗುಣಮಟ್ಟದ ಸಿಂಥೆಟಿಕ್ ಡ್ರಗ್ ತಯಾರಿಸ್ತಿದ್ದ. ಈ ಪ್ರಕರಣ ಭೇದಿಸಿದ ಸಿಸಿಬಿ ತಂಡಕ್ಕೆ 75 ಸಾವಿರ ಬಹುಮಾನ ನೀಡಲಾಗುತ್ತೆ ಅಂತಾ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದರು.












