Thursday, July 23, 2026
spot_imgspot_img
spot_imgspot_img

ಬಹುನಿರೀಕ್ಷಿತ ಸಿನಿಮಾ ‘ಕೆಜಿಎಫ್-2’ ರಿಲೀಸ್ ಗೆ ಡೇಟ್ ಫಿಕ್ಸ್!

- Advertisement -
- Advertisement -

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕನ್ನಡದ ಬಹುನಿರೀಕ್ಷಿತ ಸಿನಿಮಾ ‘ಕೆಜಿಎಫ್-2’ ರಿಲೀಸ್ ಗೆ ಮತ್ತೊಂದು ದಿನಾಂಕ ಫಿಕ್ಸ್ ಮಾಡಿದ್ದಾರೆ.

ಜುಲೈನಲ್ಲಿ ಬಿಡುಗಡೆಯಾಗಬೇಕಿದ್ದ ಪ್ರಶಾಂತ್ ನೀಲ್ ನಿರ್ದೇಶನದ ಬಹುಭಾಷಾ ಸಿನಿಮಾ ‘ಕೆಜಿಎಫ್-2’ ಕೋವಿಡ್ ಲಾಕ್ ಡೌನ್ ನಿಂದಾಗಿ ಸ್ವಲ್ಪ ಹಿನ್ನಡೆಯಾಯಿತು.

ಕೊರೋನಾ ಮೂರನೇ ಅಲೆ ಇಲ್ಲದೇ ಇದ್ದರೆ ಹಾಗೂ ಥಿಯೇಟರ್ ಶೇ.100 ರಷ್ಟು ತೆರೆಯಲು ಅವಕಾಶ ಸಿಕ್ಕರೆ ಕೆಜಿಎಫ್ 2 ಸಿನಿಮಾ ಸೆಪ್ಟೆಂಬರ್ 9 ರಂದು ಥಿಯೇಟರ್ ಗೆ ಬರಲಿದೆ. ಈ ಸಿನಿಮಾದ ಒಟಿಟಿ ಹಕ್ಕಿಗಾಗಿ ಅಮೆಝೋನ್ ಪ್ರೈಮ್ ಜೊತೆ ಮಾತುಕತೆ ನಡೆಯುತ್ತಿದೆ ಎಂಬ ಸುದ್ದಿಯಿದ್ದು, ಈ ಸುದ್ದಿ ತಿಳಿಯುತ್ತಲೇ ಪ್ರೇಕ್ಷಕರು ಖುಷಿಯಾಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ಮೊದಲ ಭಾಗ ಹೊಸ ಇತಿಹಾಸ ಸೃಷ್ಟಿಸಿದ್ದು ಹಿಂದಿ, ತೆಲುಗು, ತಮಿಳು ಸೇರಿದಂತೆ ಎಲ್ಲೆಡೆ ಅದ್ಭುತ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಇದೀಗ ಎರಡನೇ ಭಾಗದ ಮೇಲೆ ಸಿನಿ ರಸಿಕರ ನಿರೀಕ್ಷೆ ಬೆಟ್ಟದಷ್ಟಿದ್ದು, ಸಿನಿಮಾ ಬಿಡುಗಡೆಗಾಗಿ ಪ್ರೇಕ್ಷಕರು ತುದಿಗಾಲಿನ ಮೇಲೆ ನಿಂತಿದ್ದಾರೆ.

- Advertisement -

Related news

error: Content is protected !!