Wednesday, August 12, 2026
spot_imgspot_img
spot_imgspot_img

ಫೋಟೋ ಶೂಟ್ ವೇಳೆ ಅಪರಿಚಿತರ ಗುಂಪಿನಿಂದ ಚೂರಿ ಇರಿತ; ಯುವಕ ಮೃತ್ಯು

- Advertisement -
- Advertisement -

ಫೋಟೋ ಶೂಟ್ ವೇಳೆ ಅಪರಿಚಿತರ ಗುಂಪೊಂದು 22 ವರ್ಷದ ಯುವಕನಿಗೆ ಚಾಕುವಿನಿಂದ ಇರಿದು ಸಾಯಿಸಿದ್ದಾರೆ. ಈ ದುರ್ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವರ ಸಮೀಪದ ಡಾರ್ಕ್ ಫ್ಯಾಮಿಲಿ ರೆಸ್ಟೋರೆಂಟ್ ಬಳಿ ನಡೆದಿದೆ.

ಕಿಡಿಕೇಡಿಗಳ ಅಟ್ಟಹಾಸಕ್ಕೆ ಬಲಿಯಾದ ಮೃತ ಯುವಕನ ಹೆಸರು ಸೂರ್ಯ. ಐಟಿಐ ಓದುತ್ತಿದ್ದ ಸೂರ್ಯ ದೊಡ್ಡಬಳ್ಳಾಪುರ ನಗರದ ಕಚೇರಿಪಾಳ್ಯದ ನಿವಾಸಿ ಎಂದು ತಿಳಿದು ಬಂದಿದೆ.

ನಿನ್ನೆ ಭಾನುವಾರ ಆಗಿದ್ದರಿಂದ ಕಾಲೇಜಿಗೆ ರಜೆಯಿತ್ತು. ಆದ್ದರಿಂದ ಸೂರ್ಯ ತನ್ನ ನಾಲ್ವರು ಸ್ನೇಹಿತರೊಂದಿಗೆ ಫೋಟೋಶೂಟ್​ಗೆಂದು ತೆರಳಿದ್ದ. ಖಾಸಗಿ ಡಾಬಾದ ಮುಂಭಾಗ ಅಲಂಕರಿಸಲಾಗಿದ್ದ ಸೀನರಿ ಬಳಿ ಫೋಟೋ ತೆಗೆಯುವಂತೆ ಕಿಡಿಗೇಡಿಗಳು ಸೂರ್ಯ & ಫ್ರೆಂಡ್ಸ್​ ಜೊತೆ ಕಿರಿಕ್ ತೆಗೆದಿದ್ದರು. ಸರಿ ಎಂದು ಒಪ್ಪಿ ಫೋಟೋವನ್ನೂ ತೆಗೆದಿದ್ದಾರೆ ಬಳಿಕ ಅಪರಿಚಿತರ ಗುಂಪು ಯುವಕರು ಫೋಟೋ ತಗೆದಿದ್ದ ಕ್ಯಾಮೆರಾ ಕಿತ್ತುಕೊಂಡು ನಾಲ್ವರು ಯುವಕರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಸೂರ್ಯನಿಗೆ ಚಾಕುವಿನಿಂದ ಚುಚ್ಚಿದ್ದಾರೆ ಎಂದು ತಿಳಿದು ಬಂದಿದೆ.

ರಕ್ತದ ಮಾಡುವಿನಲ್ಲಿದ್ದ ಸೂರ್ಯನನ್ನು ಕೂಡಲೇ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ಕರೆದೋಯ್ದಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ದಾರಿ ಮಧ್ಯೆಯೇ ಸೂರ್ಯ ಮೃತಪಟ್ಟಿದ್ದಾನೆ. ದೀಪಾವಳಿ ಹಬ್ಬದ ದಿನದಂದೇ ಸೂರ್ಯ ಸಾವನಪ್ಪಿದ್ದು, ಮಗನನ್ನು ಕಳೆದುಕೊಂಡು ಇಡೀ ಕುಟುಂಬ ಕಣ್ಣೀರಾಕುತ್ತಿದೆ.

ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಇನ್ಸ್‌ಪೆಕ್ಟರ್ ಎಂ.ಆರ್.ಹರೀಶ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!