Saturday, May 4, 2024
spot_imgspot_img
spot_imgspot_img

ಬಂಟರ ಸಂಘ ಕಲ್ಲಡ್ಕ ವಲಯ ಆಶ್ರಯದಲ್ಲಿ ‘ಆಟಿಡೊಂಜಿ ದಿನ’ ಕಾರ್ಯಕ್ರಮ

- Advertisement -G L Acharya panikkar
- Advertisement -

ಕಲ್ಲಡ್ಕ: ಬಂಟರ ಸಂಘ ಕಲ್ಲಡ್ಕ ವಲಯ ಆಶ್ರಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಮರಾಠಿ ಸಮಾಜ ಸೇವಾ ಸಂಘ (ರಿ) ಪೂರ್ಲಿಪ್ಪಾಡಿ ಕಲ್ಲಡ್ಕದಲ್ಲಿ ನಡೆಯಿತು.

ಕೆ. ಪದ್ಮನಾಭ ರೈ ಕಲ್ಲಡ್ಕ ಅಧ್ಯಕ್ಷರು ಕಲ್ಲಡ್ಕ ವಲಯ ಬಂಟರ ಸಂಘ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಪಿಂಗಾರ ಅರಳಿಸಿ ದೀಪ ಪ್ರಜ್ವಲಿಸಿ ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ರಮಾನಾಥ ರೈ, ಚಂದ್ರ ಪ್ರಕಾಶ ಶೆಟ್ಟಿ ತುಂಬೆ, ಹೇಮಾ ಜಯರಾಮ್ ರೈ ಕಾರ್ಯದರ್ಶಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ. ಕ ಜಿಲ್ಲೆ, ಪ್ರತಿಭಾ ಎ ರೈ ಜೊತೆ ಖಜಾಂಚಿ ಬಂಟರ ಸಂಘ ಬಂಟ್ವಾಳ ತಾಲೂಕು, ಬಾಲಕೃಷ್ಣ ಆಳ್ವ ಬೊಂಡಾಲ, ಸುಜಾತ ಪಿ ರೈ ಕಲ್ಲಡ್ಕ ಖಜಾಂಚಿ ಮಹಿಳಾ ವಿಭಾಗ ಬಂಟರ ಸಂಘ ಬಂಟ್ವಾಳ ತಾಲೂಕು, ದಿವಾಕರ್ ಶೆಟ್ಟಿ ಎಕ್ಕಾರ್, ನೀನಾ ಉದಯ್ ರೈ, ರಾಮಣ್ಣ ಶೆಟ್ಟಿ ಬಾಳ್ತಿಲ, ಪ್ರಭಾಕರ ಶೆಟ್ಟಿ ಅಮ್ಟೂರು, ಐತಪ್ಪ ಶೆಟ್ಟಿ ಪಾಣೆಮಂಗಳೂರು, ಪ್ರೇಮನಾಥ ಶೆಟ್ಟಿ ನರಿಕೊಂಬು, ಸಂದೀಪ್ ಶೆಟ್ಟಿ ಅರೆಬೆಟ್ಟು ವೀರಕಂಭ, ಸಂತೋಷ್ ಶೆಟ್ಟಿ ಸೀನಾಜೆ ಅಧ್ಯಕ್ಷರು ಯುವ ಬಂಟರ ಸಂಘ, ಮಹೇಶ್ ಶೆಟ್ಟಿ ಗೋಳ್ತಮಜಲು, ಬಂಟ್ವಾಳ ಯುವ ಬಂಟರ ಅಧ್ಯಕ್ಷ ನಿಶಾನ್ ಆಳ್ವ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತುಳುನಾಡಿನ ವಿಶೇಷ ಆಟಿ ತಿಂಗಳ ಆಚಾರ, ವಿಚಾರ, ನಂಬಿಕೆ, ಸಂಪ್ರದಾಯ, ಮಹತ್ವಗಳ ಬಗ್ಗೆ ಬಿ. ಎ ಪದವಿ ಪೂರ್ವ ಕಾಲೇಜು ತುಂಬೆ ಇಲ್ಲಿನ ರಾಜ್ಯಶಾಸ್ತ್ರ ಉಪನ್ಯಾಸಕ ದಿನೇಶ್ ಶೆಟ್ಟಿ ಅಳಿಕೆ ಇವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ, ಪುತ್ತೂರು ತಾಲೂಕು ಜರ್ನಲಿಸ್ಟ್ ಯೂನಿಯನ್ ನ ಅಧ್ಯಕ್ಷರಾಗಿ ಆಯ್ಕೆಯಾದ ರಾಮ್‌ದಾಸ್‌ ಶೆಟ್ಟಿ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗೆ ಆಯ್ಕೆಯಾದ ಪ್ರಜ್ವಲ್ ಶೆಟ್ಟಿ ಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಸಮಾಜದ ಹಿರಿಯರನ್ನು ಗೌರವಿಸಲಾಯಿತು.

ಕಾರ್ಯಕ್ರಮವನ್ನು ನಾಗೇಶ್‌ ಶೆಟ್ಟಿ ಬೊಂಡಾಲ ಅಂತರಗುತ್ತು ಮತ್ತು ಸುನಾದ್‌ ರಾಜ್‌ ಶೆಟ್ಟಿ ಬೊಂಡಾಲ ಅಂತರಗುತ್ತು ನಿರೂಪಿಸಿ, ಗಣೇಶ್ ಶೆಟ್ಟಿ ಗೋಳ್ತಮಜಲು ವರದಿ ವಾಚಿಸಿದರು. ಸುರೇಶ್ ಶೆಟ್ಟಿ ಕಾಂದಿಲ ಸಹಕರಿಸಿದರು.

- Advertisement -

Related news

error: Content is protected !!