- Advertisement -
- Advertisement -
ಪಣಕಜೆಯ ಅರ್ತಿಲ ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಮಾ.22 ರಂದು ನಡೆದಿದೆ.

ಬಂಟ್ವಾಳ ತಾಲೂಕು ಮಧ್ವ ನಿವಾಸಿ ಮಹಮ್ಮದ್ ನಝೀರ್(26.ವ) ಘಟನೆಯಲ್ಲಿ ಮೃತಪಟ್ಟ ದುರ್ದೈವಿ. ಮದ್ದಡ್ಕದಲ್ಲಿ ಶುಭಾರಂಭಗೊಂಡ ಇಂಜಿನಿಯರಿಂಗ್ ವಕ್ರ್ಸ್ ಅಂಗಡಿಯೊಂದರ ಕಾರ್ಯಕ್ರಮಕ್ಕೆ ಇಂದು(ಮಾ.22) ತಮ್ಮ ಬೈಕ್‍ನಲ್ಲಿ ಬರುತ್ತಿರುವ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.

ಅರ್ತಿಲ ತಿರುವಿನಲ್ಲಿ ದ್ವಿಚಕ್ರ ವಾಹನವು ಮಗುಚಿ ಬಿದ್ದಿದ್ದು, ಅಪಘಾತಕ್ಕೆ ಒಳಗಾದ ಮಹಮ್ಮದ್ ನಝೀರ್ ರವರು ಇನ್ನೊಂದು ಕಡೆ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಸ್ಥಳೀಯರ ಸಹಾಯದಿಂದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾದರೂ ಅದಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

ಸ್ಥಳಕ್ಕೆ ಪುಂಜಾಲಕಟ್ಟೆ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೈಕ್ ಸ್ಕಿಡ್ ಆಗಿ ಈ ಘಟನೆ ನಡೆಯಿತೇ ಅಥವಾ ಯಾವುದಾದರೂ ವಾಹನ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿತೇ ಎಂಬುವುದು ಇನ್ನಷ್ಟೇ ತನಿಖೆಯಿಂದ ತಿಳಿಯಬೇಕಾಗಿದೆ.

- Advertisement -