Wednesday, April 23, 2025
spot_imgspot_img
spot_imgspot_img

ಬಂಟ್ವಾಳ: ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಕಾರು; ಹೊಡೆತದ ರಭಸಕ್ಕೆ ವೃದ್ಧೆ ಮೃತ್ಯು, ಮತ್ತೋರ್ವರಿಗೆ ಗಾಯ..!

- Advertisement -
- Advertisement -

ಬಂಟ್ವಾಳ: ಕಾರು ಚಾಲಕಿಯ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡ ಘಟನೆ ಬಂಟ್ವಾಳ ತಾಲೂಕು ಚೆನ್ನೈತ್ತೋಡಿ ಗ್ರಾಮದ ಪಾಲೆದಮರ ಎಂಬಲ್ಲಿ ನಡೆದಿದೆ.

ಮೃತಪಟ್ಟ ಮಹಿಳೆಯನ್ನು ಸುಮತಿ ಹಾಗೂ ಗಾಯಗೊಂಡವರನ್ನು ಲೂಯಿಸ್ ಡಿಕೋಸ್ತ ಎಂದು ಗುರುತಿಸಲಾಗಿದೆ.

ಫೆ. 23 ರಂದು ಸಂಜೆ ವೇಳೆ ಬಂಟ್ವಾಳ ತಾಲೂಕು, ಚೆನ್ನೈತ್ತೋಡಿ ಗ್ರಾಮದ, ಪಾಲೆದಮರ ಎಂಬಲ್ಲಿ, KA21M8167 ನೇ ನೊಂದಣಿ ಸಂಖ್ಯೆಯ ಕಾರನ್ನು ಚಾಲಕಿ ಶೋಭಾ ಎಂಬವರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಚಾಲಕಿಯ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿ, ಅಂಗಡಿಗೆ ಬಂದಿದ್ದ ಗ್ರಾಹಕರಾದ ಲೂಯಿಸ್ ಡಿಕೋಸ್ತ ರವರಿಗೆ ಡಿಕ್ಕಿ ಹೊಡೆದು, ಬಳಿಕ ಅಂಗಡಿಯ ಬಳಿ ಕುಳಿತಿದ್ದ ಗಣೇಶ್ ಮಲ್ಯರವರ ಅಜ್ಜಿ ಸುಮತಿರವರಿಗೆ ಡಿಕ್ಕಿ ಹೊಡೆದಿರುತ್ತದೆ. ಪರಿಣಾಮ ಸುಮತಿ ರವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿ ರಾತ್ರಿ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.

ಅಪಘಾತದಿಂದ ಲೂಯಿಸ್ ಡಿಕೋಸ್ತರವರು ಗಾಯಗೊಂಡಿರುತ್ತಾರೆ ಹಾಗೂ ದ್ವಿಚಕ್ರ ವಾಹನ KA19EJ9797 ಮುಂಭಾಗ ಜಖಂಗೊಂಡಿರುತ್ತದೆ. ಈ ಬಗ್ಗೆ ಗಣೇಶ್ ಮಲ್ಯರವರ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅ.ಕ್ರ17/2025 ಕಲಂ: 281 125A 106 BNS- 2023 ರಂತೆ ಪ್ರಕರಣ ದಾಖಲಾಗಿರುತ್ತದೆ.

- Advertisement -

Related news

error: Content is protected !!