




ಬಂಟ್ವಾಳ ತಾಲೂಕಿನ ಕುರ್ನಾಡು ಗ್ರಾಮದ ಮುಡಿಪು ಎಂಬಲ್ಲಿ “ಗುರುಲೀಲಾ” ಎಂಬ ಹೆಸರಿನ ಚಿಕನ್ ಸೆಂಟರ್ ನಡೆಸುತ್ತಿದ್ದ ವ್ಯಕ್ತಿಯೋರ್ವರು ಕಳೆದ ಹಲವು ವರ್ಷಗಳಿಂದ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ನಾಪತ್ತೆಯಾದ ವ್ಯಕ್ತಿಯನ್ನು ಶ್ರೀಧರ್ (48) ಎಂದು ಗುರುತಿಸಲಾಗಿದೆ.
ಶ್ರೀಧರ್ ಅವರು 2019ರ ಮಾರ್ಚ್ 18ರಂದು ಬೆಳಿಗ್ಗೆ 6.00 ಗಂಟೆಗೆ ಎಂದಿನಂತೆ ತಮ್ಮ ಚಿಕನ್ ಸೆಂಟರ್ ಅಂಗಡಿಗೆ ತೆರಳಿ ವ್ಯಾಪಾರ ಪ್ರಾರಂಭಿಸಿದ್ದರು. ಬೆಳಿಗ್ಗೆ 8.30 ಗಂಟೆ ವೇಳೆಗೆ ಅಂಗಡಿ ಬಾಗಿಲು ಮುಚ್ಚಿಕೊಂಡು ಎಲ್ಲಿಗೋ ತೆರಳಿ, ಬಳಿಕ ಅಂಗಡಿಗೂ ಮನೆಗೂ ಮರಳದೇ, ಅವರ ಮೊಬೈಲ್ ಫೋನ್ ಸಹ ಸ್ವಿಚ್ ಆಫ್ ಆಗಿರುವುದಾಗಿ ತಿಳಿದುಬಂದಿದೆ.
ಶ್ರೀಧರ್ ( 48) ಎತ್ತರ: ಸುಮಾರು 175 ಸೆ.ಮೀ, ಮೈಬಣ್ಣ: ಗೋಧಿ ಬಣ್ಣ, ಚಹರೆ: ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಬೂದು ಬಣ್ಣದ ಉದ್ದತೋಳಿನ ಶರ್ಟ್ ಧರಿಸಿದ್ದು, ಕನ್ನಡ, ಹಿಂದಿ, ಮಲಯಾಳಂ, ತುಳು ಮಾತನಾಡುತ್ತಾರೆ.
ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದು ಕಾಣೆಯಾದ ಶ್ರೀಧರ್ ಎಂಬವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣವಾಗಿ ಸಂಪರ್ಕಿಸಲು ವಿನಂತಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ನಿಯಂತ್ರಣ ಕೊಠಡಿ: 0824-2220800, ಕೊಣಾಜೆ ಪೊಲೀಸ್ ಠಾಣೆ: 0824-2220536 / 9480802350 ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.








